ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶ

Ample opportunities in the field of journalism
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಓರಿಯೆಂಟೇಶನ್​ ಕಾರ್ಯಕ್ರಮವನ್ನು ವಿಜಯವಾಣಿ ಹಿರಿಯ ವರದಿಗಾರ ಪರಶುರಾಮ ಭಾಸಗಿ ಉದ್ಘಾಟಿಸಿದರು. ಪ್ರೊ. ಓಂಕಾರ ಕಾಕಡೆ, ಸಂದೀಪ ನಾಯಕ್​, ಡಾ. ತಹಮೀನ ಕೋಲಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಉತ್ತಮ ಬರವಣಿಗೆಯ ಕೌಶಲ, ವಿಮರ್ಶಾತ್ಮಕ ಚಿಂತನೆ, ಆಧುನಿಕತೆ ತಂತ್ರಜ್ಞಾನದ ಜ್ಞಾನ ಮತ್ತು ಸ್ಪಷ್ಟ ಸಂವಹವನ್ನು ಕರಗತ ಮಾಡಿಕೊಂಡರೆ ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು "ವಿಜಯವಾಣಿ' ದಿನಪತ್ರಿಕೆಯ ಹಿರಿಯ ವರದಿಗಾರ ಪರುಶುರಾಮ ಭಾಸಗಿ ಹೇಳಿದರು.

ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಓರಿಯೆಂಟೇಶನ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಹೆಚ್ಚು ಹೆಚ್ಚು ಕೌಶಲಗಳನ್ನು ಅಳವಡಿಸಿಕೊಂಡರೆ ಅಂತಹ ಅವಕಾಶಗಳನ್ನು ನಿಮ್ಮದಾಗಲಿವೆ ಎಂದು ಸಲಹೆ ನೀಡಿದರು.

ಮಾಧ್ಯಮ ೇತ್ರದಲ್ಲಿ ಪ್ರಗತಿ ಸಾಧಿಸಲು ಕೌಶಲಗಳು ಪ್ರಮುಖ ಪಾತ್ರ ವಹಿಸಲಿವೆ. ಕೇವಲ ಅಧ್ಯಯನ ಮಾತ್ರವಲ್ಲ, ಉತ್ತಮ ಬರವಣಿಗೆಯ ಕೌಶಲ, ವಿಚಾರಧಾರೆಗಳು ಹಾಗೂ ವಿಭಿನ್ನ ಭಾಷೆಗಳ ಪ್ರಭುತ್ವವು ಮುಖ್ಯ. ಜತೆಗೆ ವಿಶ್ಲೇಷಣೆ, ತೀಕ್ಷ$್ಣ ನೋಟ ಹಾಗೂ ನಿರಂತರವಾಗಿ ಕಲಿಯುವ ಹಂಬಲ ನಿಮ್ಮಲ್ಲಿದ್ದರೆ ಯಶಸ್ಸಿನ ದಾರಿಗೆ ಸಾಗಲು ಸುಲಭವಾಗಲಿದೆ. ಹೊಸ&ಹೊಸ ವಿಚಾರಗಳನ್ನು ಅನ್ವೇಷಿಸಲು ನಿರಂತರ ಪ್ರಯತ್ನ ನಿಮ್ಮದಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಪತ್ರಿಕೋದ್ಯಮದ ಸಮಾಜದ ಕಣ್ಣಿನಂತೆ ಕಾರ್ಯ ನಿರ್ವಹಿಸುತ್ತದೆ. ಕೇವಲ ಪಠ್ಯಾಧಾರಿತ ಅಧ್ಯಯನ ನಡೆಸದೇ, ವೃತ್ತಿಪರ ಕೌಶಲಗಳನ್ನು ಕಲಿಯಬೇಕು ಎಂದರು.

ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ್​ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿನಿಯರಾದ ಶ್ರುತಿ ಬೆಳ್ಳುಂಡಗಿ, ಮಲ್ಲಮ್ಮಾ ಪುಜಾರಿ, ಲಕ್ಷ್ಮೀ ಎಸ್​., ದೀಪಿಕಾ ಖತ್ರಿ, ದೀಕ್ಷಾ ಮುಚ್ಚಂಡಿ, ಮತ್ತು ಖುದಿಜಾ ಖಾನ್​ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿನಿ ಸುಷ್ಮಾ ಪವಾರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನ ಕೋಲಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಫಿಲೋಮಿನಾ ನಿರೂಪಿಸಿದರು, ಪವಿತ್ರಾ ಕಂಬಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net