ವೃದ್ಧರಲ್ಲಿ ಓದುವ ಹವ್ಯಾಸ ಬೆಳೆಸುವ ಕಾರ್ಯ ಶ್ಲಾಘನೀಯ

ಸಿಂಧನೂರು 1
ಸಿಂಧನೂರಿನ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ನೂತನ ಗ್ರಂಥಾಲಯವನ್ನು ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿದರು. ಆಶ್ರಮದ ಗೌರವಾಧ್ಯಕ ಶರಣು.ಪಾ.ಹಿರೇಮಠ, ಕಾರ್ಯಾಧ್ಯಕ್ಷ ವೀರೇಶ ಯಡಿಯೂರುಮಠ, ಸಹನಾ ಹಿರೇಮಠ ಕೊಪ್ಪಳ, ಪ್ರಶಾಂತ ಹಿರೇಮಠ ಕೊಪ್ಪಳ ಇದ್ದರು.
Published on

ಸಿಂಧನೂರು: ಗ್ರಂಥಾಲಯ ತೆರೆದಿದ್ದರಿಂದ ವೃದ್ಧರಲ್ಲಿ ಓದುವ ಹವ್ಯಾಸ ಬೆಳೆಯಲು ಸಾಧ್ಯ. ಇದಕ್ಕೆ ಎಲ್ಲರು ಸಹಕಾರ ಅಗತ್ಯ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಇತ್ತಿಚಿಗೆ ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ಜೀವಿಗಳು ಹಾಗೂ ಆಶ್ರಮಕ್ಕೆ ಸಮಯ ಕಳೆಯಲು ಬರುತ್ತಿರುವ ನಿವೃತ್ತ ಹಾಗೂ ಹಿರಿಯ ನಾಗರಿಕರಗಾಗಿ ಗ್ರಂಥಾಲಯ ನಿರ್ಮಿಸಿರುವುದು ಒಳ್ಳೆಯ ಕಲಸವಾಗಿದೆ.

ಈ ವಯಸ್ಸಿನಲ್ಲಿ ಸಮಯ ಕಳೆಯಲು ಇಂಥ ಜ್ಞಾನ ಹೆಚ್ಚಿಸುವ ಕೆಲಸ ನಡೆಯಬೇಕು. ಹಿರಿಯ ನಾಗರಿಕರಲ್ಲಿ ವಿದ್ಯಾವಂತರಿದ್ದು ಇದರ ಅವಶ್ಯಕತೆ ಅವರಿಗೆ ಹೆಚ್ಚಿದೆ.

ಪುಸ್ತಕದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಜತೆಗೆ ನಾಡಿನಲ್ಲಿ ಹಿರಿಯರ ಗೌರವವನ್ನು ಹೆಚ್ಚಿಸುತ್ತಿರುವ ಕಾರ್ಯ ಕಾರುಣ್ಯ ಆಶ್ರಮ ಮಾಡುತ್ತಿದೆ ಎಂದರು.
ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಶರಣಸ್ವಾಮಿ, ಬಸವಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net