

ಕೊಳವಿ: ಗ್ರಾಮದಲ್ಲಿ ಪ್ರತಿವರ್ಷ ಸಂಭ್ರಮದ ಕಾರ್ತಿಕೋತ್ಸವ ಆಚರಿಸುವುದರ ಜತೆಗೆ ಶ್ರೀಗೂಳಿ ಬಸವೇಶ್ವರ ಯುವಕ ಸಂಘ ವಿವಿಧ ಸ್ಪರ್ಧೆ ಆಯೋಜಿಸುವ ಮೂಲಕ ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ. ಈ ಬಾರಿ ರಾಜ್ಯಮಟ್ಟದ ತೆರೆ ಬಂಡಿ ಸ್ಪರ್ಧೆ ಆಯೋಜಿಸಿರುವುದು ಕೃಷಿಕರಲ್ಲಿ ಸಂತಸ ಇಮ್ಮಡಿಸಿದೆ ಎಂದು ಕೆಎಂಎ್ ಸದಸ್ಯ ಅಮರನಾಥ ಜಾರಕಿಹೊಳಿ ಹೇಳಿದರು.
ಗ್ರಾಮದಲ್ಲಿ ಶ್ರೀಗೂಳಿ ಬಸವೇಶ್ವರ ಹಾಗೂ ಶ್ರೀಬೀರಸಿದ್ದೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ತೆರೆ ಬಂಡಿ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತೆರೆ ಬಂಡಿ ಸ್ಪರ್ಧೆಗೆ ತವಗ ಮಠದ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮೀಜಿ, ಬಸಯ್ಯ ಹುಲಕಂತಿಮಠ ಹಾಗೂ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ಚಾಲನೆ ನೀಡಿದರು. ಶ್ರೀಗೂಳಿ ಬಸವೇಶ್ವರ ದೇವಸ್ಥಾನದಲ್ಲಿ ತೆರೆ ಬಂಡಿಗೆ ವಿಶೇಷ ಪೂಜೆ ನೆರವೇರಿಸಿ, ಭವ್ಯ ಮೆರವಣಿಗೆ ಮೂಲಕ ಗಟ್ಟಿ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.
ಶ್ರೀ ಗೂಳಿ ಬಸವೇಶ್ವರ ಹಾಗೂ ಶ್ರೀ ಬೀರಸಿದ್ದೇಶ್ವರ ದೇವಸ್ಥಾನಕ್ಕೆ ಕೆಎಂಎ್ ಸದಸ್ಯ ಅಮರನಾಥ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಮಡ್ದೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಅಮರನಾಥ ಜಾರಕಿಹೊಳಿ ಸೇರಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ವಿವಿಧ ಬಹುಮಾನ: ಪ್ರಥಮ ಬಹುಮಾನ ಎಚ್‌ಎ್ ಡಿಲಕ್ಸ್ ಬೈಕ್, ದ್ವಿತೀಯ ಏಳು ಗ್ರಾಂ ಚಿನ್ನ ಹಾಗೂ ತೃತೀಯ ಬಹುಮಾನ 5 ಗ್ರಾಂ ಚಿನ್ನ ಸೇರಿ ವಿಜೇತರಿಗೆ ಒಟ್ಟು 15 ಬಹುಮಾನಗಳಿವೆ. ಸುಮಾರು 40 ಜೋಡಿ ಎತ್ತುಗಳನ್ನು ಆಯ್ಕೆ ಮಾಡಲಾಯಿತು.
ಗ್ರಾಪಂ ಅಧ್ಯಕ್ಷ ಕರೆಪ್ಪ ಬಡಿಗವಾಡ, ಬಿ.ಡಿ.ಪಾಟೀಲ, ಶಿವಾನಂದ ಮಮದಾಪುರ, ಶಂಕರ ವಣಕಿ, ಶಿವಾನಂದ ಮಮದಾಪುರ, ಡಾ.ಮಲ್ಲಿಕಾರ್ಜುನ ನೆಗಳಿ, ಮಲ್ಲಿಕಾರ್ಜುನ ಸ್ವಾಮೀಜಿ, ಬಾಳಪ್ಪ ನೆಗಳಿ, ಬಾಳಯ್ಯ ಪೂಜೇರಿ, ಅಶೋಕ ಸಿಂಗಾಡಿ, ನಿಂಗಪ್ಪ ಪಾಟೀಲ, ಸಂಜು ಹಿರಟ್ಟಿ, ಬಾಳಪ್ಪ ಅಂಗಡಿ, ದೇವಾನಂದ ಕಂಬಾರ, ನಾಗರಾಜ ಕಂಬಾರ, ಭೀಮಗೌಡ ಪಾಟೀಲ, ಚನ್ನಮಲ್ಲಯ್ಯ ಹುಲಕಂತಿಮಠ, ಬಾಳೇಶ ವನಕಿ ಇತರರು ಇದ್ದರು.