ಸಿಂಗಾರಗೊಂಡಿದೆ ಅಮ್ಮತ್ತಿ ಪಟ್ಟಣ

ಚಿತ್ರ 20ಎಸ್ ಡಿ ಪಿ 7
ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಿಂಗಾರಗೊಂಡಿರುವ ಅಮ್ಮತ್ತಿ ಪಟ್ಟಣ.
Published on

ಸಿದ್ದಾಪುರ: ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರ ಲೋಕಾರ್ಪಣೆ ಮತ್ತು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೊಡಗಿನ ಅಮ್ಮತ್ತಿ ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದೆ.


ಪಟ್ಟಣದ ಮುಖ್ಯ ಸರ್ಕಲ್ ಹಾಗೂ ಮೇಲ್ಭಾಗದಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟಿ ಸಿಂಗರಿಸಲಾಗಿದೆ. ಅಲ್ಲದೇ, ಪಟ್ಟಣದ ಪ್ರಮುಖ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಮ್ಮತ್ತಿ ಪಟ್ಟಣದಲ್ಲಿ ಸಂಪೂರ್ಣ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಂಗಡಿ-ಮುಂಗಟ್ಟು, ಆಟೋಗಳು ಸೇರಿದಂತೆ ವಾಹನಗಳಲ್ಲಿ ರಾಮನ ಚಿತ್ರವಿರುವ ಕೇಸರಿ ಧ್ವಜಗಳು ವಿಜೃಂಭಿಸುತ್ತಿವೆ. ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ದಿನದಂದು ಅಮ್ಮತ್ತಿಯ ವಿವಿಧ ದೇವಸ್ಥಾನಗಳಲ್ಲಿ ರಾಮನಾಮ ಪಠಣ ಭಜನೆ ಸೇರಿದಂತೆ ಪೂಜೆಗಳು ನಡೆದಲು ಸಿದ್ಧತೆ ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net