ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಓವರಾಲ್ ಚಾಂಪಿಯನ್

31adarshkdga9
Published on


ಮಡಿಕೇರಿ: ಗೋವಾದಲ್ಲಿ ಆಯೋಜಿಸಿದ್ದ ರೈನ್ ಫಾರೆಸ್ಟ್ ಚಾಲೆಂಜ್ ರ‌್ಯಾಲಿಯಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಕೋಡ್ರೈವರಾಗಿ ರ‌್ಯಾಲಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಓವರಾಲ್ ಚಾಂಪಿಯನ್ನಾಗಿ ಮಿಂಚಿದ್ದಾರೆ.


ಇಟರ್‌ನ್ಯಾಷನಲ್ ಆಪ್ ರೋಡ್ ಅಫ್ ಮಲೇಷಿಯಾದ ವತಿಯಿಂದ ಜು೨೩ ರಿಂದ ಜು೩೦ರ ವರೆಗೆ ೭ ದಿನ ಗೋವಾದಲ್ಲಿ ರ‌್ಯಾಲಿ ಆಯೋಜಿಸಲಾಗಿತ್ತು. ಸಾಹಸ ರ‌್ಯಾಲಿ ಕ್ರೀಡೆಯಲ್ಲಿ ಕರ್ನಾಟಕದಿಂದ ಉದ್ದಪಂಡ ಚೇತನ್ ಹಾಗು ಬೆಂಗಳೂರಿನ ಸತೀಶ್ ಕುಮಾರ್ ಭಾಗವಹಿಸಿದ್ದರು. ಮೂರು ಬಾರಿ ಜೀಪಿ ಮಗುಚಿತ್ತು. ಆದರೂ ಚಲಬಿಡದೆ ಹಲವು ಹಂತಗಳನ್ನು ದಾಟಿ ಗೆಲುವು ಸಾಧಿಸಿದರು.


ಭಾರತದ ಹಲವು ರಾಜ್ಯಗಳ ನುರಿತ ರ‌್ಯಾಲಿ ಕ್ರೀಡಾಪಟುಗಳೊಳಗೊಂಡ ೨೭ ಜೀಪುಗಳು ೨೫ ಹಂತದಲ್ಲಿ ಭಾಗವಹಿಸಿದ್ದರು. ಯುವರ‌್ಯಾಲಿಪಟು ಕೊಡಗಿನ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ೨೦೧೬ರಿಂದ ೨೦೨೦ರವರೆಗೆ ವಿವಿಧೆಡೆ ನಡೆದ ರೈನ್ ಫಾರೆಸ್ಟ್ ಚಾಲೆಂಜ್‌ನಲ್ಲಿ ಉದ್ದಪಂಡ ಚೇತನ್ ಚಂಗಪ್ಪ, ಹಿರಿಯ ಅನುಭವಿ ರ‌್ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪರವರೊಂದಿಗೆ ಅತ್ಯುತ್ತಮ ಸಾಹಸ ಮೆರೆದು ಚಾಂಪಿಯನ್ನಾಗಿ ಹೊರಹೊಮ್ಮಿದರು.


ಉತ್ತಮ ಸಾಹಸದೊಂದಿಗೆ ರೋಮಾಂಚಕಾರಿ ರೈನ್ ಫಾರೆಸ್ಟ್ ಚಾಲೆಂಜ್ ಗೆಲುವಂತಾಗಿದೆಂದು ಉದ್ದಪಂಡ ಚೇತನ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net