ಅಮ್ಮತ್ತಿ ಆರ್‌ಐಎಚ್‌ಪಿ ಆಸ್ಪತ್ರೆಯಲ್ಲಿ ಡೆಂಟಲ್ ಕೇರ್, ಡಯಾಲಿಸ್ ಸೆಂಟರ್

15mdkn2 - Copy
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಅಮ್ಮತ್ತಿಯ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ (ಆರ್‌ಐಎಚ್ ಪಿ) ಆಸ್ಪತ್ರೆಗೆ ಒದಗಿಸಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಕರೆ ನೀಡಿದರು.

ಆಸ್ಪತ್ರೆಯಲ್ಲಿ ಪ್ರಾರಂಭಿಸುತ್ತಿರುವ ನೂತನ ಹೆಚ್ಚುವರಿ ಕೊಠಡಿಯನ್ನ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ಆಸ್ಪತ್ರೆಯ ನೂತನವಾಗಿ ಡೆಂಟಲ್ ಕೇರ್ ಕೊಠಡಿ ಹಾಗೂ ಡಯಾಲಿಸ್ ಸೆಂಟರ್ ಪ್ರಾರಂಭಿಸಿರು ವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಆಸ್ಪತ್ರೆಯಲ್ಲಿ ಹೆಚ್ಚುವರಿ ಸೇವೆಗೆ ಬೇಕಾದ ಆರ್ಥಿಕ ನೆರವು ನೀಡಲಾಗುವುದು. ಜನಸಾಮಾನ್ಯರಿಗೆ ಎಲ್ಲಾ ಆರೋಗ್ಯ ಸೌಲಭ್ಯ ಸಿಗುವಂತಾಗಲಿ ಎಂದರು.

ಸಮಾಜ ಸೇವಕ ಪುಗ್ಗೇರ ದೇವಯ್ಯ ಮಾತನಾಡಿ, ಆಸ್ಪತ್ರೆಯು ಬಹಳ ಹಿಂದಿನಿಂದಲೂ ಉತ್ತಮ ಸೇವೆ ಮಾಡುತ್ತಾ ಬಂದಿದೆ. ದಾನಿಗಳ ಸಹಕಾರದಿಂದ ಗ್ರಾಮೀಣ ಪ್ರದೇಶದ ಜನರಿಗೆ ಮತ್ತಷ್ಟು ಸೇವೆ ಒದಗಿಸಲು ಮುಂದಾಗಿರುವ ಆಡಳಿತ ಮಂಡಳಿ ಕಾರ್ಯ ಅಭಿನಂದನರ್ಹ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಆಸ್ಪತ್ರೆ ವೈದ್ಯ ಡಾ. ಚಂದ್ರು ಮಾತನಾಡಿ, ಅಸ್ಪತ್ರೆಯಲ್ಲಿ ಈಗಾಗಲೇ ಸುಸಜ್ಜಿತ ೪೮ ಹಾಸಿಗೆಗಳಿವೆ. ದಿನದ ೨೪ ಗಂಟೆಯೂ ವೈದ್ಯಕೀಯ, ತುರ್ತು ಆರೈಕೆ, ಶಸ್ತ್ರಚಿಕಿತ್ಸಾ ಮತ್ತು ಅಪಘಾತ ಚಿಕಿತ್ಸಾ ಸೇವೆ ಒದಗಿಸುತ್ತಿದೆ. ಡಿಜಿಟಲ್ ಎಕ್ಸರೇ, ಇಸಿಜಿ, ಅಲ್ಟ್ರಾ ಸೌಂಡ್ ಸ್ಕಾನಿಂಗ್, ಡಯಾಲಿಸಿಸ್, ಡೆಂಟಲ್ ಮತ್ತು ಫಿಸಿಯೋಥರಪಿ ಸೇವೆ ಪ್ರಾರಂಭಿಸಿದ್ದೇವೆ. ಡಯಾಗ್ನೋಸ್ಟಿಕ್ ಸೆಂಟರ್ ಸೇರಿದಂತೆ ಎಲ್ಲಾ ಸೇವೆಗಳಿಗೂ ಒದಗುವ ರೀತಿಯ ವಾರ್ಡ್ ಸೌಲಭ್ಯ ಹಾಗೂ ತುರ್ತು ಪ್ರಕರಣ ನಿಭಾಯಿಸಲು ಸುಸಜ್ಜಿತ ಆಪರೇಷನ್ ಥಿಯೇಟರ್ ಸೌಲಭ್ಯ ಇದೆ ಎಂದರು.

ಟಾಟಾ ಕಾಫಿ ಸಂಸ್ಥೆ ಅಧ್ಯಕ್ಷ ಎಂ.ಬಿ. ಗಣಪತಿ, ಪ್ರಮುಖರಾದ ಡಾ. ಪಿ.ಜಿ. ಚಂಗಪ್ಪ, ಡಾ.ಎಂ.ಎಂ. ಚಂಗಪ್ಪ, ಬೋಸ್ ಮಂದಣ್ಣ, ಕೆ.ಪಿ. ಉತ್ತಪ್ಪ, ವಿನೋದ್ ಶಿವಪ್ಪ ಮತ್ತಿತರರು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net