ಪಾಲಿಬೆಟ್ಟ ನೆಹರು ಫುಟ್ಬಾಲ್ ಕ್ಲಬ್ ಚಾಂಪಿಯನ್

2mdkd4 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಅಮ್ಮತ್ತಿ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ೨ನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲಿಬೆಟ್ಟ ನೆಹರು ಫುಟ್ಬಾಲ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೋಣಿಕೊಪ್ಪ ಗ್ಲೋಬಲ್ ಫುಟ್ಬಾಲ್ ಕ್ಲಬ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆ ಸಂಸ್ಥಾಪಕ ಕೆ.ಎ .ಕುಶಾಲಪ್ಪ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬಲ ಹೆಚ್ಚಿಸಲು ಸಹಕಾರಿಯಾಗಿದೆ. ಉತ್ತಮ ಆರೋಗ್ಯವು ಲಭಿಸಲಿದೆ ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ- ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ (ನಿವೃತ್ತ), ಪ್ರಮುಖರಾದ ಮಾದಂಡ ತಿಮ್ಮಯ್ಯ, ಡಾ.ಟಿ.ಪಿ. ಚಂದ್ರು, ಪಾಲಂದಿರ ರಾಧಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಎಚ್.ಎನ್. ಪದ್ಮ, ಸೇವಾ ವಿಶಿಷ್ಠಿ ಪ್ರಶಸ್ತಿ ಪಡೆದ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.

ಅಮ್ಮತ್ತಿ ಚೌಡೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ವೆಂಕಟೇಶ್, ಗುತ್ತಿಗೆದಾರ ಮಂಜುನಾಥ್, ಪ್ರಮುಖರಾದ ಎಚ್.ಆರ್. ಗಿರೀಶ್, ಪಿ.ಕೆ. ಜಾಲಿ ಪೂಣಚ್ಚ, ಕೆ.ಎ. ಹಂಸ, ಅಶ್ರಫ್, ಆಶಾ ಹೊಟೇಲ್ ಮಾಲೀಕ ರಮೇಶ್ ಮತ್ತಿತರರು ಇದ್ದರು. ಕಿರಣ್ ಸ್ವಾಗತಿಸಿದರು. ಲತೀಫ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net