ಹುಬ್ಬಳ್ಳಿಯಿಂದ ದೆಹಲಿಯತ್ತ ಅಮಿತ್ ಷಾ| ಪ್ರಲ್ಹಾದ್ ಜೋಶಿ ಮನೆ ಎದುರು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿದ ಷಾ

amith Shah Polio lasike 19 JAN 20
Published on

ಹುಬ್ಬಳ್ಳಿ: ಕರ್ನಾಟಕ ಪ್ರವಾಸ ಮುಗಿಸಿದ ಕೇಂದ್ರ ಗೃಹ ಸಚಿವ ಭಾನುವಾರ ಬೆಳಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಬಳಿಕ ಅವರ ಮನೆಯ ಎದುರು ಇದ್ದ ಬೂತ್​ಗೆ ಪಲ್ಸ್​ ಪೊಲಿಯೋ ಲಸಿಕೆ ಅಭಿಯಾನಕ್ಕೆ ಆಗಮಿಸಿದ್ದ ಮಕ್ಕಳಿಗೆ ಅಮಿತ್ ಷಾ ಲಸಿಕೆ ಹಾಕಿದರು.

ಜೋಶಿ ಅವರ ಆಹ್ವಾನದ ಮೇರೆಗೆ ಷಾ ಆಗಮಿಸಿದ್ದರು. ಅವರಿಗಾಗಿ ಅವಲಕ್ಕಿ ಉಪ್ಪಿಟ್ಟು, ಚೌಚೌ ಬಾತ್ ಅನ್ನು ಉಪಾಹಾರಕ್ಕೆ ಸಿದ್ಧಗೊಳಿಸಿದ್ದರು. ಷಾ ಅವರು ಶನಿವಾರ ಡೆನಿಸನ್ಸ್ ಹೋಟೆಲ್​ನಲ್ಲಿ ತಂಗಿದ್ದರು.

ಜೋಶಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದ ಬಳಿಕ ದೆಹಲಿಯತ್ತ ಪಯಣ ಬೆಳೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಹಲವರು ಸಾಥ್ ನೀಡಿದ್ದರು. ರೈತ ಮುಖಂಡರು, ಕಾರ್ಯಕರ್ತರು ಮತ್ತು ಚಿಣ್ಣರು ಹೂಗುಚ್ಛ ನೀಡಿ ಷಾ ಅವರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net