ಬೆಳಗಾವಿಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

IMG-20230506-WA0042.webp
Published on

ಬೆಳಗಾವಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರದಲ್ಲಿ ಶನಿವಾರ ಸಂಜೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪರ ಮತಯಾಚನೆ ಮಾಡಿದರು.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಯಾರನ್ನೋ ಶಾಸಕನ್ನಾಗಿ ಹಾಗೂ ಮಂತ್ರಿಯನ್ನಾಗಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಮತಬ್ಯಾಂಕ್ ರಾಜಕಾರಣದ ಹಾಗೂ ಭಜರಂಗಬಲಿ ಗೌರವಿಸಿದ ಕಾಂಗ್ರೆಸ್‌ಗೆ ಅಧಿಕಾರದಿಂದ ದೂರವಿಡಿ. ಆ ಮೂಲಕ ಹಿಂದುತ್ವ ರಕ್ಷಣೆಗೆ ಬದ್ಧವಾಗಿರುವ ಬಿಜೆಪಿಯನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಹೇಳಿದರು.
ಬಜೆಪಿಯ ಅಭ್ಯರ್ಥಿ ಡಾ.ರವಿ ಪಾಟೀಲ ಅವರು ಬೆಳಗಾವಿಯಲ್ಲಿನ ಜನತೆ ಶಾಂತಿ-ಸಹಬಾಳ್ವೆಯ ಜೀವನ ನಡೆಸುವುದರ ಜತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಷ್ಠ ಗುರಿ-ಉದ್ದೇಶಹೊಂದಿದ್ದು, ಅವರನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಂಬರುವ 2024ರಲ್ಲಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ, ಸುಭದ್ರ ಹಾಗೂ ಡಬಲ್ ಇಂಜಿನ್ ಸರ್ಕಾರ ನಡೆಸಲು ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಆಯ್ಮೆ ಮಾಡಬೇಕು. ಇದೀಗ ನಡೆಯುತ್ತಿರುಯವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಲ್ಲಿರುವ ತಮ್ಮ ಎಲ್ಲ ಸಂಬಂಧಿಕರೂ ಬಿಜೆಪಿ ಅಭ್ಯರ್ಥಿಗಳಿಗೇ ಮತದಾನ ಮಾಡುವಂತೆ ತಿಳಿಹೇಳಿ ಎಂದು ಮತಯಾಚನೆ ಮಾಡಿದರು.
ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಗೊಂಡ ರೋಡ್‌ಶೋ, ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿ ಮಾರ್ಗವಾಗಿ ಸಂಚರಿಸಿತು. ಇದನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ರವಿ ಪಾಟೀಲ ಬೆಂಬಲಿಗರು ಬಿಜೆಪಿ ಪರವಾಗಿ ಘೋಷಣೆ ಕೂಗಿದರು. ನಾಯಕರ ಮೇಲೆ ಪುಷ್ಪವೃಷ್ಠಿ ಮಾಡಿದರು.
ರೋಡ್ ಶೋ ಉದ್ದಕ್ಕೂ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಜನ ಅಪಾರಸಂಖ್ಯೆಯಲ್ಲಿ ಸೇರಿದ್ದರು. ಜನರತ್ತ ಕೈಬೀಸಿದ ಶಾ, ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಕೊಡುವಂತೆ ಕೋರಿದರು. ಒಂದೆಡೆ ಬಿಜೆಪಿ ಬಾವುಟಗಳ ರಾರಾಜಿಸಿದರೆ, ಮತ್ತೊಂದೆಡೆ ಕೇಸರಿ ಪೇಠ ತೊಟ್ಟಿದ್ದ ನೂರಾರು ಮಹಿಳೆಯರು ಗಮನಸೆಳೆದರು. ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net