ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಬರಲಿದ್ದಾರೆ Amitabh Bachchan

Amitabh
Published on

ಮುಂಬೈ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ (Gavisiddeshwara Jatre) ಭಕ್ತರು ವಿವಿಧೆಡೆಯಿಂದ ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಈ ಬಾರಿ ಬಾಲಿವುಡ್​ನ ಬಿಗ್​ ಬಿ ಅಮಿತಾಬ್​ ಬಚ್ಚನ್​ (Amitabh Bachchan) ಅವರನ್ನು  ಗವಿಮಠದ ಆಡಳಿತ ಮಂಡಳಿ ಜಾತ್ರೆಗೆ ಆಹ್ವಾನಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಜನವರಿ 15ರಿಂದ ಆರಂಭವಾಗಲಿರುವ ಗವಿಸಿದ್ದೇಶ್ವರ ಜಾತ್ರೆಗೆ ಆಮಂತ್ರಿಸಲು ಇತ್ತೀಚೆಗೆ ಅಮಿತಾಭ್‌ರನ್ನು ಮಠದ ಆಡಳಿತ ಮಂಡಳಿವರು ಭೇಟಿ ಮಾಡಿದ್ದಾರೆ.  ಅಮಿತಾಭ್​ ಬಚ್ಚನ್​ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಜಾತ್ರೆಗೆ ಬರುವ ಸಾಧ್ಯತೆ ಹೆಚ್ಚಿದೆ.  ಈ ಜಾತ್ರೆಯು ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿದೆ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಅಮಿತಾಭ್ ಬಚ್ಚನ್ ಆಗಮಿಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆಯಲಿದೆ. ಲಕ್ಷಾಂತರ ಜನ ಗವಿಸಿದ್ದೇಶ್ವರ ಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ.

Gavimatt Invitation

ರಥೋತ್ಸವ ದಿನದಿಂದ ತಿಂಗಳ ಕಾಲ ನಡೆಯೋ ಜಾತ್ರೆಗೆ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಗವಿಮಠಕ್ಕೆ ಬಂದು, ಗವಿಸಿದ್ದೇಶಿವರರ ದರ್ಶನ ಪಡೆಯುತ್ತಾರೆ.  ಭಕ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ ಕೂಡ ಇರುತ್ತದೆ.ಜಾತ್ರೆಗೆ ಒಂದು ತಿಂಗಳು ಇರುವಾಗಲೇ ಭಕ್ತರು ತಮ್ಮ ತಮ್ಮ ಮನೆಯಲ್ಲಿ ತಮ್ಮ ಶಕ್ತ್ಯಾನುಸಾರ ರೊಟ್ಚಿ,ಶೇಂಗಾ ಹೋಳಿಗೆ, ಕಡಬು, ಶೇಂಗಾ ಹಿಂಂಡಿಯನ್ನು ಸಿದ್ದಗೊಳಿಸಿ ಮಠಕ್ಕೆ ತಂದು ನೀಡುತ್ತಾರೆ.

ಪ್ರತಿವರ್ಷವು ಜಾತ್ರೆಯಲ್ಲಿ ಸಮಾಜಿಕ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ವಿಶಿಷ್ಟ ಕಾರ್ಯಕ್ರಮ ನೆಡೆಯುತ್ತದೆ. ಈವರೆಗೂ ಬಾಲ್ಯವಿವಾಹ ತಡೆ, ವಿಕಲಚೇತನರಿಗೆ ಕಂಕಣ ಭಾಗ್ಯ ಜಲದೀಕ್ಷೆ, ಸಶಕ್ತ ಮನ – ಸಂತ್ರಪ್ತ ಜೀವನ, ಕೃಪಾದೃಷ್ಟಿ - ನೇತ್ರದಾನ ಜಾಗೃತಿ, ಲಕ್ಷ ವೃಕೋತ್ಸವ, ಸರಳ ಜಾತ್ರೆ - ಸಮಾಜಮುಖಿ ಜಾತ್ರೆ, ಅಡವಿಹಳ್ಳಿ ಗ್ರಾಮ ದತ್ತು ಕ್ಯಾನ್ಸರ್ ರೋಗ ತಪಾಸಣೆ, ಗಿಣಗೇರಿ ಕೆರೆ ಹೂಳೆತ್ತುವುದು ಹಾಗೂ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮಗಳು ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net