

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಪತ್ನಿ ಸೋನಾಲ್ ಷಾ ಭಾನುವಾರ ನಗರದ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದರು.
ಸುತ್ತೂರು ಮಠದಲ್ಲಿ ಹಮ್ಮಿಕೊಂಡಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಅಮಿತ್ ಷಾ ಅವರು ಆಗಮಿಸಿದ್ದರು. ಅಮಿತ್ ಷಾ ಅವರೊಂದಿಗೆ ವಿಶೇಷ ವಿಮಾನದಲ್ಲಿ ಪತ್ನಿ ಸೋನಾಲ್ ಷಾ ಸಹ ಆಗಮಿಸಿದ್ದು, ಅವರು ಗಣಪತಿ ಸಚ್ಚಿದಾನಂದ ಆಶ್ರಮದ ಶುಖವನಕ್ಕೆ ಭೇಟಿ ನೀಡಿ ಅಲ್ಲಿನ ಪಕ್ಷಿಗಳೊಂದಿಗೆ ಕೆಲ ಸಮಯ ಕಾಲ ಕಳೆದು ಸಂಭ್ರಮಿಸಿದರು.