

ಹುಬ್ಬಳ್ಳಿ: ಮೃತ ನೇಹಾಳ ತಂದೆ ನಿರಂಜನ ಹಿರೇಮಠ, ತಾಯಿ ಗೀತಾ ಹಿರೇಮಠ ಅವರು ನಗರಕ್ಕೆ ಬುಧವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಕೆಲ ಹೊತ್ತು ಅಮಿತ್ ಷಾ ಜತೆಗೆ ಚರ್ಚೆ ನಡೆಸಿದ ನಂತರ ಬರೆದುಕೊಂಡು ಬಂದಿದ್ದ ಮನವಿಯನ್ನು ನಿರಂಜನ ಹಿರೇಮಠ ಅವರು ಸಲ್ಲಿಸಿದರು. ಹಂತಕನಿಗೆ ಗಲ್ಲು ಶಿಕ್ಷೆ, ನೇಹಾ ಹಿರೇಮಠ ಹೆಸರಲ್ಲಿ ಹೊಸ ಕಾಯ್ದೆ ಜಾರಿ, ತ್ವರಿತ ನ್ಯಾಯಾಲಯ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳನ್ನು ಕೇಂದ್ರ ಸಚಿವ ಅಮಿತ್ ಷಾ ಮುಂದೆ ಮಂಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ನೇಹಾ ಸಹೋದರ ನಿಹಾಲ್ ಹಿರೇಮಠ ಇದ್ದರು.