ಅಮಿತ್ ಷಾ ವಜಾಕ್ಕೆ ಒತ್ತಾಯ

23Anand2
ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿ ಅಂಬೇಡ್ಕರ್ ಅಭಿಮಾನಿ ಬಳಗದವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸುರೇಂದ್ರ ಉಗಾರೆ, ಬಾಳಕೃಷ್ಣ ಕಾಂಬಳೆ, ಉಮಾ ಮಾದಾರ ಇತರರಿದ್ದರು.
Published on

ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸೋಮವಾರ ವಕೀಲರು ಹಾಗೂ ಅಂಬೇಡ್ಕರ್ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಸಂಸತ್ತಿನ ಅಧಿವೇಶನದದಲ್ಲಿ ಸಂವಿಧಾನದ 75ನೇ ವರ್ಷದ ಚರ್ಚಾ ವಿಷಯದ ವೇಳೆ ಕೇಂದ್ರ ಸಚಿವ ಅಮಿತ್ ಷಾ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದು ಇಡಿ ಭಾರತಕ್ಕೆ ಅವಮಾನ ಮಾಡಿದಂತೆ. ಸಂವಿಧಾನಿಕ ಹುದ್ದೆಯಲ್ಲಿದ್ದು ಈ ರೀತಿ ಮಾತನಾಡಿದ್ದು ಖಂಡನೀಯ. ಕೂಡಲೇ ಅಮಿತ್ ಷಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಮನವಿ ಮೂಲಕ ಒತ್ತಾಯಿಸಿದರು.

ಸುರೇಂದ್ರ ಉಗಾರೆ, ಬಾಳಕೃಷ್ಣ ಕಾಂಬಳೆ, ಕುಮಾರ ಕಾಂಬಳೆ, ಉಮಾದೇವಿ ಮಾದಾರ, ಶಕುಂತಲಾ ಕಾಂಬಳೆ, ರೇಣುಕಾ ಹೆಗ್ಗನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net