ಸಂಗಮೇಶ್ವರ ಸಂಘಕ್ಕೆ 19 ಲಕ್ಷ ರೂ. ಲಾಭ

AMD-15-01A
Published on

ಅಮೀನಗಡ : ಸ್ಥಳೀಯ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ 19 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಹಿರೇಮಠ ತಿಳಿಸಿದರು.

ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೀಡಾದಂತೆ ನಮ್ಮ ಬ್ಯಾಂಕ್ ಕೂಡ ಹೊರತಾಗಿರಲಿಲ್ಲ. ಆದರೂ ಬ್ಯಾಂಕ್ ಗ್ರಾಹಕರ ವಿಶ್ವಾಸದೊಂದಿಗೆ 19 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.

ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷೆ ಪಿ.ಆರ್.ಅರಳೆಲೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ಪಾಂಡುರಂಗ ದಡ್ಡೇನವರ ವರದಿ ವಾಚಿಸಿದರು. ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ನಿರ್ದೇಶಕರಾದ ಎಸ್.ಐ.ಮುಳ್ಳೂರ, ವಿಜಯಕುಮಾರ ಕನ್ನೂರ, ಗುರು ಹಿರೇಮಠ, ಸಂತೋಷ ಐಹೊಳ್ಳಿ, ಈರಣ್ಣ ಬಳಬಟ್ಟಿ, ಕುಶಪ್ಪ ಕಾಳಗಿ, ರಾಮಣ್ಣ ಬ್ಯಾಕೋಡ, ಮುತ್ತಪ್ಪ ಬಂಡಿವಡ್ಡರ, ಶಾಂತಪ್ಪ ಹಂಡರಗಲ್ಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net