ಅಮೀನಗಡದಲ್ಲಿ ಹುಚ್ಚುನಾಯಿ ಕಡಿದು ನಾಲ್ವರಿಗೆ ಗಾಯ

210520 Kavital Mad Dog Cut
Published on

ಕವಿತಾಳ: ಸಮೀಪದ ಅಮೀನಗಡ ಗ್ರಾಮದಲ್ಲಿ ಬುಧವಾರ ಹುಚ್ಚುನಾಯಿ ನಾಲ್ವರು ಗಾಯಗೊಂಡಿದ್ದಾರೆ. ಗ್ರಾಮದ ಆಶಾ ಕಾರ್ಯಕರ್ತೆ ಸರಸ್ವತಿ(28), ಚಂದನ್(15 ತಿಂಗಳು), ಅಂಜಲಿ(3) ಮತ್ತು ಸಮ್ರಿನ್(18) ಎಂಬುವವರಿಗೆ ಹುಚ್ಚುನಾಯಿ ಕಚ್ಚಿದೆ. ಗಾಯಗೊಂಡವರಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಹೆಚ್ಚು ಗಾಯಗೊಂಡ ಮಗು ಚಂದನ್‌ನನ್ನು ಲಿಂಗಸಗೂರು ಪಟ್ಟಣದ ಖಾಸಗಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತಂಕ: ಹುಚ್ಚು ನಾಯಿ ಗ್ರಾಮದಲ್ಲಿ ಜನರ ಜತೆಗೆ ನಾಲ್ಕು ನಾಯಿಗಳಿಗೂ ಕಚ್ಚಿದ್ದು ಅವುಗಳಿಗೂ ಹುಚ್ಚು ಹಿಡಿದರೆ ಹೇಗೆ ? ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net