ಮಂಗಳೂರಿಂದ ಊರಿಗೆ ಬಂದು ಮಹಿಳೆಯನ್ನು ಕೊಲೆ ಮಾಡಿ ನೇಣಿಗೆ ಶರಣಾದ ಯುವಕ!

AMD CRIME
Published on

ಅಮೀನಗಡ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಸಮೀಪದ ಕೆಲೂರ ಗ್ರಾಮದಲ್ಲಿ ಮಹಿಳೆಯನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ.

ಮಂಗಳವಾರ ಬೆಳಗಿನ ಜಾವ ಕೆಲೂರ ಗ್ರಾಮದಿಂದ 1 ಕಿ.ಮೀ. ದೂರದಲ್ಲಿರುವ ಜಮೀನಿನ ಗುಡಿಸಲಿನಲ್ಲಿ ಮಂಜುನಾಥ ಹನುಮಪ್ಪ ಐಹೊಳೆ (23) ನೇಣು ಹಾಕಿಕೊಂಡಿದ್ದಾನೆ. ಇದಕ್ಕೂ ಮುಂಚೆ ಬಾಳವ್ವ ಸಿದ್ದಪ್ಪ ಬನ್ನೆಪ್ಪನವರ (27) ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೆಲೂರ ಗ್ರಾಮದವರಾದ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಎರಡು ದಿನದ ಹಿಂದೆ ಸ್ವಗ್ರಾಮ ಕೆಲೂರಿಗೆ ಆಗಮಿಸಿದ್ದನು. ಈ ಸಂದರ್ಭದಲ್ಲಿ ಬಾಳವ್ವಳನ್ನು ಭೇಟಿ ಮಾಡಲು ಜಮೀನಿಗೆ ತೆರಳಿದ್ದಾನೆ. ಬಾಳವ್ವ ಮತ್ತೊಬ್ಬನ ಜತೆಗೆ ಸಂಬಂಧ ಇಟ್ಟುಕೊಂಡಿರುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಬಾಳವ್ವಳನ್ನು ಮಂಜುನಾಥ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮಂಜುನಾಥ ತಾನೂ ಅಲ್ಲಿಯೇ ಇದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಹನುಮಪ್ಪ ಐಹೊಳೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net