

ಅಮೀನಗಡ: ಸಮೀಪದ ಬಾಣಂತಿಕೊಳ್ಳದ ಬಳಿ ಗ್ರಾನೈಟ್ ಕಲ್ಲು ಸಾಗಣೆ ಮಾಡುತ್ತಿದ್ದ ಟ್ರಾೃಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಟ್ರೇಲರ್ ಸೋಮವಾರ ರಾತ್ರಿ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗದ್ದನಕೇರಿ ಗ್ರಾಮದ ಕುತುಬುದ್ದೀನ್ ಕುಣಬಿ (20) ಹಾಗೂ ಸಂತೋಷ ಸೋರಕೊಪ್ಪ (28) ಮೃತರು. ಈರಪ್ಪ ಕುಂಬಾರ ಅವರಿಗೆ ಗಂಭೀರ ಗಾಯವಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಬಸಪ್ಪ ಗದ್ದನಕೇರಿ ಪರಾರಿಯಾಗಿದ್ದಾನೆ. ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
EndFragment