ಅಮೀನಗಡ ಪಿಕೆಪಿಎಸ್ ಚುನಾವಣೆ ಫಲಿತಾಂಶ

amd election
ಅಮೀನಗಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.
Published on

ಅಮೀನಗಡ: ಕೋರ್ಟ್ ಆದೇಶದಿಂದ ತಡೆ ಹಿಡಿದಿದ್ದ ಅಮೀನಗಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾರ ಪ್ರಭುಗಳು ಅಚ್ಚರಿ ಫಲಿತಾಂಶ ನೀಡಿದ್ದಾರೆ.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ನಡೆದ ಮತ ಎಣಿಕೆಯಲ್ಲಿ 11 ಕ್ಷೇತ್ರಕ್ಕೆ 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮಾನ್ಯ ಕ್ಷೇತ್ರದಿಂದ ಮೈಲಾರಪ್ಪ ನರಿ-230, ಸಂಗಪ್ಪ ಕತ್ತಿ -219, ಚಂದ್ರಕಾಂತ ಚೌಕಿಮಠ -214, ಲೂಹಿತ ಸಂಗಪ್ಪ ರಕ್ಕಸಗಿ -214, ಹುಸೇನಸಾಬ ಬಾಗೇವಾಡಿ-173, ಪರಿಶಿಷ್ಠ ಜಾತಿಯಿಂದ ತಾಯಪ್ಪ ಹುಲಗಿನಾಳ -168, ಹಿಂದುಳಿದ ಅ.ವರ್ಗದಿಂದ ಚಂದ್ರಕಾಂತ ಸಂಗಟಿ-163, ಹಿಂದುಳಿದ ಬ.ವರ್ಗದಿಂದ ಬಸವರಾಜ ನರಿ -254, ಮಹಿಳೆ ಪಂಪವ್ವ ಯಡ್ನಪ್ಪನವರ -237, ಮಹಿಳೆ ಶಿವವ್ವ ರಾಮತಾಳ -233, ಸಾಲೇತರ ಕ್ಷೇತ್ರದಿಂದ ಪಾಪಣ್ಣ ಭದ್ರಶೆಟ್ಟಿ-68 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಬಿ.ಎನ್. ಪೊಲೀಸ್‌ಪಾಟೀಲ, ಸಹಾಯಕ ಚುನಾವಣಾಧಿಕಾರಿ ಎನ್.ಬಿ.ರಾಮವಾಡಗಿ, ಪಿಎಸ್‌ಐ ಶಿವಾನಂದ ಕೆ. ಹಾಗೂ ಪಿಕೆಪಿಎಸ್ ಸಿಬ್ಬಂದಿ ಇದ್ದರು. ಮತ ಎಣಿಕೆ ವೇಳೆ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಜಯೋತ್ಸವ ಆಚರಣೆ:
ಗೆಲುವು ಸಾಧಿಸಿದ ಅಭ್ಯರ್ಥಿಗಳು ತಮ್ಮ ಮುಖಂಡರು, ಬೆಂಬಲಿಗರೊಂದಿಗೆ ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಅಲ್ಲದೆ, ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net