ಕರೊನಾ ವೈರಸ್​ ಭೀತಿ ನಡುವೆ ಸರಳ ವಿವಾಹವಾದ ಪ್ರೇಮಿಗಳು: ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ

wedding 28 mar 20
Published on

ಬಳ್ಳಾರಿ: ಕರೊನಾ ವೈರಸ್​ ಭೀತಿ ನಡುವೆಯೇ ಪ್ರೇಮಿಗಳು ಸಿದ್ದಾಪುರ ಗ್ರಾಮದ ಮಲಿಯಮ್ಮ ದೇವಿ ದೇವಾಲಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದ ರೋಹಿಣಿ(20) ಹಾಗೂ ಮಧು( 25 ) ಸರಳವಾಗಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.

ಇಬ್ಬರು ಪರಸ್ವರ ಪ್ರೀತಿಸುತ್ತಿದ್ದರು. ಇವರ ವಿವಾಹಕ್ಕೆ 2 ಕುಟುಂಬದವರ ಒಪ್ಪಿಗೆ ಇತ್ತು. ಬಂಧುಬಳಗ ಕರೆದು ವಿವಾಹ ನೆರವೇರಿಸಲು 2 ಕುಟುಂಬದವರೂ ನಿರ್ಧರಿಸಿದ್ದರು. ಆದರೆ ಕರೊನಾ ವೈರಸ್​ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿವಾಹ ರದ್ದುಪಡಿಸಿರುವುದರಿಂದ ಸರಳವಾಗಿ ದೇವಾಲಯದಲ್ಲಿ ವಿವಾಹವಾದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net