

ಹುಬ್ಬಳ್ಳಿ: ಇಲ್ಲಿಯ ಅಮರಗೋಳದಲ್ಲಿ ಮುಸ್ಲಿಂ ಸಮುದಾಯದ ಜನರು ಶುಕ್ರವಾರ ಪ್ರವಾದಿ ಮಹ್ಮದ ಪೈಗಂಬರರ ಜನ್ಮದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಗ್ರಾಮದ ಮಸೀದಿಯಿಂದ ಮೆರವಣಿಗೆ ನಡೆಸಲಾಯಿತು. ಧಾರ್ಮಿಕ ಗುರು ಸೌಕತ್ ಅಲೀ ಮುಲ್ಲಾ, ಕಾಸೀಮಸಾಬ ದರ್ಗಾದ. ನಜೀರ ಅಹ್ಮದ ಕೋಲಕಾರ, ಮಹ್ಮದ ರಫೀಕ ದರ್ಗಾದ, ರಾಜೇಸಾಬ ಕಲ್ಲೂರ. ಮಾಬುಸಾಬ ನದಾಫ, ರಾಯಸಾಬ ದರ್ಗಾದ, ರಾಜೇಸಾಬ ಮುಳ್ಳೂರ, ರಫೀಕ ಮುಲ್ಲಾ. ಬಾಬು ಕರ್ನೂಜಿ, ಬಾಬಾಜಾನ ಮುಲ್ಲಾ ಮುಂತಾದವರು ಪಾಲ್ಗೊಂಡಿದ್ದರು.