ವಲಸಿಗರ ಕೈ ಕಾಲಿಗೆ ಕೋಳ,  ಭಾರತಕ್ಕೆ ಮಾಡಿದ ಅವಮಾನ, ಶಾಸಕ ಅಬ್ಬಯ್ಯ ಆಕ್ರೋಶ

IMG-20240924-WA0017-2.jpg
Published on

ಹುಬ್ಬಳ್ಳಿ: ಅಕ್ರಮ ವಲಿಸಿಗರನ್ನು ಹೊರಹಾಕುವುದು ಆಯಾ ದೇಶದ ಹಕ್ಕು. ಆದರೆ, ಕೈಕೋಳ ತೊಡಿಸಿ ಕೈದಿಗಳಂತೆ ಅಮಾನವೀಯವಾಗಿ ನಡೆಸಿಕೊಂಡಿದ್ದು, ಇಡೀ ಭಾರತೀಯರಿಗೆ ಮಾಡಿದ ಅವಮಾನ. ಈ ವಿಷಯದಲ್ಲಿ ಪ್ರಧಾನಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಿಸಿದ್ದಾರೆ.

ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ಮೀತೆ ಏನು ಎಂಬುದನ್ನು ಅಮೆರಿಕವು 104 ಭಾರತೀಯ ಅಕ್ರಮ ವಲಸಿಗರಿಗೆ ಕೈಕೋಳ, ಕಾಲಿಗೆ ಬೇಡಿಹಾಕಿ ತಮ್ಮದೇ ವಿಮಾನದಲ್ಲಿ ಭಾರತಕ್ಕೆ ಬಂದು ಬಿಟ್ಟು ಹೋಗುವ ಮೂಲಕ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.

ಇದನ್ನೆಲ್ಲ ಮೂಕ ಪ್ರೇಕ್ಷಕರಂತೆ ನೋಡುತ್ತಿರುವ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಪ್ರಧಾನಿ ಮೋದಿ ಅವರು ತಮ್ಮ ಆತ್ಮೀಯ ಗೆಳೆಯ ಎಂದು ಬೀಗುತ್ತಿದ್ದ ಅಮೆರಿಕದ ಟ್ರಂಪ್ ಬಗ್ಗೆ ಸಾಕಷ್ಟು ಗುಣಗಾನ ಮಾಡಿದ್ದರು. ತಕ್ಷಣವೇ ಭಾರತ ಅಮೆರಿಕ ದೇಶದ ನಡತೆಯ ಬಗ್ಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಅಬ್ಬಯ್ಯ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net