ಶಿಡ್ಲಘಟ್ಟದಲ್ಲಿ ರೇಷ್ಮೆ ಕೃಷಿಯ ಬಗ್ಗೆ ಅಧ್ಯಯನ ನಡೆಸಿದ ಅಮೇರಿಕಾ ಸಂಶೋಧಕಿ

17.04.2025-SDLP-02.jpg
Published on

ಶಿಡ್ಲಘಟ್ಟ : ಅಮೇರಿಕಾದಲ್ಲಿ ರೇಷ್ಮೆ ಕೃಷಿ ಸಂಶೋಧಕಿಯಾಗಿರುವ ತಾಬಿತ ಶಿಡ್ಲಘಟ್ಟದಲ್ಲಿ ರೇಷ್ಮೆ ಕೃಷಿ ಮತ್ತು ರೇಷ್ಮೆ ಉದ್ದಿಮೆಯ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದರು.
ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮಕ್ಕೆ  ಭೇಟಿ ನೀಡಿ ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಣೆ ಮನೆ, ಚಂದ್ರಿಕೆ ಶೆಡ್ ಗಳನ್ನು ವೀಕ್ಷಿಸಿದರು. ಬಳಿಕ
ನಗರದ ಹಲವು ಕಡೆ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ, ಆಟೋ ಮಿಟಿಕ್ ರೀಲಿಂಗ್ ಘಟಕ(ಎ.ಆರ್.ಎಂ ಯಂತ್ರ) ಮಲ್ಟಿ ಎಂಡ್ ಮಿಷನ್ ಇನ್ನಿತರೆ ಯಂತ್ರಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು.
ಹಿತ್ತಲಹಳ್ಳಿಯ ಹಿಪ್ಪು ನೇರಳೆ ತೋಟಕ್ಕೆ ಭೇಟಿ ನೀಡಿದ ಅವರಿಗೆ ರೈತ ಎಚ್.ಕೆ.ಸುರೇಶ್ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ರೇಷ್ಮೆ ಹುಳು ಸಾಕಣೆ, ರೇಷ್ಮೆಗೂಡು ಉತ್ಪಾದನೆಯಲ್ಲಿನ ಏರು ಪೇರು, ಎದುರಾಗುತ್ತಿರುವ ಸಮಸ್ಯೆಗಳು, ಕಾಣಿಸಿಕೊಳ್ಳುತ್ತಿರುವ ರೋಗಗಳು, ಅವುಗಳ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕೆಲಸಗಾರರ ಕೊರತೆ, ಬೆಲೆಯ ಏರಿಳಿತ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ರೇಷ್ಮೆ ಕೃಷಿಯಲ್ಲಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆ ತಿಳಿದುಕೊಳ್ಳಲಾಯಿತು.
ನಂತರ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿನ ತಾಂತ್ರಿಕತೆ ಬಳಕೆ, ಯಂತ್ರಗಳ ಕಾರ್ಯ, ಎದುರಾಗುತ್ತಿರುವ ಸಮಸ್ಯೆಗಳು, ಸರಕಾರದ ಸವಲತ್ತುಗಳ ಬಗ್ಗೆ ರೀಲರುಗಳಿಂದ ಮಾಹಿತಿ ಪಡೆದುಕೊಂಡರು. ಕೆಎಸ್‌ಎಂಬಿಯ ಬೆನಕಪ್ಪ ಹುಬ್ಬಳ್ಳಿ, ಗೋಪಿನಾಥ್ ಮತ್ತಿತರರು ಜತೆಗಿದ್ದರು.




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net