

ಸಿದ್ದಾಪುರ: ತಾಲೂಕಿನ ಕಾನಗೋಡಿನ ಸಾಮಾನ್ಯ ಸೇವಾ ಕೇಂದ್ರದಲ್ಲಿ ಭಾರತೀಯ ಅಂಚೆ ಇಲಾಖೆ ಶಿರಸಿ ವಿಭಾಗವು ಆ. 29 ಮತ್ತು 30ರಂದು ಆಧಾರ್ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನು ಆಯೋಜಿಸಿದೆ. ಜನ್ಮ ದಿನಾಂಕ, ಹೆಸರು, ವಿಳಾಸ ಬದಲಾವಣೆಗಳಿಗೆ ಅಗತ್ಯ ದಾಖಲೆ ತರಬೇಕು. ಮಕ್ಕಳಿಗೆ ಆಧಾರ್ ಮಾಡಿಸಲು ಜನ್ಮದಾಖಲೆ, ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಜತೆಗೆ ಮಗುವಿನೊಂದಿಗೆ ತಂದೆ, ತಾಯಿ ಬರಬೇಕು. ಸರ್ಕಾರದ ವಿವಿಧ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ ಆಧಾರ್ ಸೀಡಿಂಗ್ ಹಾಗೂ ಅಂಚೆ ಖಾತೆಗಳನ್ನು ತೆರೆದುಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.