

ಲಿಂಗಸುಗೂರು: ಪಟ್ಟಣದ ಐಎಂಎ ಸಭಾಂಗಣ ಬಳಿ ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗಾಯಗೊಂಡ ಸವಾರರು ಆಂಬುಲೆನ್ಸ್ ಬಾರದ ಕಾರಣ ಕೆಲಕಾಲ ಒದ್ದಾಡಿದ್ದಾರೆ.
ಒಂದು ಬೈಕ್‌ನಲ್ಲಿದ್ದ ಕನಸಾವಿಯ ಚಾಂದ್‌ಪಾಷಾ-ಮಂಜುನಾಥ ಹಾಗೂ ಇನ್ನೊಂದು ವಾಹನದ ಕರಡಕಲ್ ನಾಗರಾಜ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳದಲ್ಲಿದ್ದವರು ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.
ಆದರೆ, ಒಂದು ತಾಸಾದರೂ ಬರಲಿಲ್ಲ. ಹೀಗಾಗಿ ಸ್ಥಳೀಯರೇ ಖಾಸಗಿ ವಾಹನ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಂಬುಲೆನ್ಸ್ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.