ಆಂಬುಲೆನ್ಸ್-ಟ್ರಾೃಕ್ಟರ್ ನಡುವೆ ಡಿಕ್ಕಿ

Arkera Accidetn
ರಸ್ತೆ ಅಪಘಾತದಲ್ಲಿ ಆಂಬುಲೆನ್ಸ್ ಮುಂಭಾಗ ಜಖಂಗೊಂಡಿರುವುದು.
Published on

ಅರಕೇರಾ: ತಾಲೂಕಿನ ಕ್ಯಾದಿಗ್ಗೇರಾ ಕ್ರಾಸ್ ಬಳಿ 108 ಆಂಬುಲೆನ್ಸ್ ಮತ್ತು ಟ್ರ್ಯಾಕ್ಟರ್ ನಡುವೆ ಶುಕ್ರವಾರ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ರಾಯಚೂರಿನಿಂದ ಅರಕೇರಾಕ್ಕೆ ಮರಳಿ ಬರುವಾಗ ಕ್ಯಾದಿಗ್ಗೇರಾ ಕ್ರಾಸ್‌ನಲ್ಲಿ ಸಿರವಾರ ಮಾರ್ಗವಾಗಿ ಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟ್ರಾೃಕ್ಟರ್ ನಡುವೆ ಅಪಘಾತ ಸಂಭವಿಸಿದೆ.

ಆಂಬುಲೆನ್ಸ್ ಚಾಲಕ ವಿಜಯ ಕುಮಾರ ತಲೆಗೆ ಪೆಟ್ಟಾಗಿದ್ದು, ಇಎಂಟಿ ಹನುಮಂತಗೆ ಕಾಲು ಮುರಿದಿದೆ. ಇಬ್ಬರನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಂಬುಲೆನ್ಸ್ ಮುಂಬಾಗ ಜಖಂಗೊಂಡಿದ್ದು, ಟ್ರ್ಯಾಕ್ಟರ್ ಟ್ರಾಲಿ ರಸ್ತೆಗೆ ವಾಲಿದೆ. ದೇವದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net