ಇಂದಿರಾ ಗಾಂಧಿ ನೆನಪಿಗೆ ಆಂಬುಲೆನ್ಸ್ ಸೇವೆ

ambulance service
Published on

ಹಳೆಯಂಗಡಿ: ಉಕ್ಕಿನ ಮಹಿಳೆ ಎಂದು ವಿಶ್ವ ಪ್ರಸಿದ್ಧಿ ಪಡೆದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ಗ್ರಾಮೀಣ ಬಡವರ್ಗದ ಜನರ ಉನ್ನತಿಗಾಗಿ ನೀಡಿದ ಸೇವೆ ನೆನಪಿಸಿಕೊಂಡು ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಉಪಯೋಗಕ್ಕೆ ಇಂದಿರಾ ಗಾಂಧಿ ತುರ್ತು ಉಚಿತ ಆಂಬುಲೆನ್ಸ್ ಸೇವೆ ನೀಡಲಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಹಳೆಯಂಗಡಿಯಲ್ಲಿ ಶನಿವಾರ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಸಿಹಿತ್ಲು ಅಗ್ಗಿದಕಳಿಯದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಜಂಟಿ ಸಹಯೋಗದಲ್ಲಿ ಉಚಿತ ಆಂಬುಲೆನ್ಸ್ ಸೇವೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮೂಲ್ಕಿ ಮೂಡಬಿದಿರೆ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ, ಕೆಪಿಸಿಸಿ ವಕ್ತಾರ ಎಚ್.ವಸಂತ ಬೆರ್ನಾಡ್, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗ ಕಾರ್ಯದರ್ಶಿ ಪ್ರವೀಣ್ ಬೊಳ್ಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಇಂಟಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಅಶ್ವಿನ್ ಆಳ್ವ, ಮೂಲ್ಕಿ ನಗರ ಪಂಚಾಯಿತಿ ಸದಸ್ಯರಾದ ಪುತ್ತುಬಾವ ಕಾರ್ನಾಡ್, ಬಾಲಚಂದ್ರ ಕಾಮತ್, ಹಳೆಯಂಗಡಿ ಗ್ರಾಪಂ ಸದಸ್ಯರಾದ ಧನ್‌ರಾಜ್ ಕೋಟ್ಯಾನ್, ಅಬ್ದುಲ್ ಅಜೀಜ್, ಸತೀಶ್ ಕೋಟ್ಯಾನ್, ಅಬ್ದುಲ್ ಖಾದರ್, ಪ್ರಮುಖರಾದ ಕಿರಣ್ ಕೋಟ್ಯಾನ್, ಮಿರ್ಜಾ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು. ಮೂಲ್ಕಿ ಬ್ಲಾಕ್ ಜಾಲತಾಣ ಮುಖ್ಯಸ್ಥ ಧರ್ಮಾನಂದ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತುರ್ತು ಸೇವೆಗಾಗಿ ಇಂದಿರಾ ಗಾಂಧಿ ಆಂಬುಲೆನ್ಸ್ ಉಚಿತ ಸೇವೆ ಬಡವರ್ಗದವರಿಗೆ ಮೀಸಲಾಗಿದೆ. ಇಂದಿನ ಪರಿಸ್ಥಿತಿಯ ಅನಿವಾರ್ಯತೆ ಗಮನಿಸಿ ಸೇವೆ ನೀಡಲಾಗುತ್ತಿದೆ. ಮುಂದೆಯೂ ಕಾಂಗ್ರೆಸ್‌ನಿಂದ ಇಂಥ ಸೇವೆ ನಿರಂತರ ನಡೆಯಲಿದೆ. ಅಭಯಚಂದ್ರ ಜೈನ್ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net