ತುರ್ತು ಸೇವೆಗೆ ಆಂಬುಲೆನ್ಸ್ ಅಲಭ್ಯ : ಸಮಯಕ್ಕೆ ಆಸ್ಪತ್ರೆ ತಲುಪಲು ರೋಗಿಗಳ ಪರದಾಟ

14_GUDI_Ambulance
Published on

ಗುಡಿಬಂಡೆ: ತುರ್ತು ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸುವ 108 ಆಂಬುಲೆನ್ಸ್ ಸಾರ್ವಜನಿಕ ಆಸ್ಪತ್ರೆಯಲ್ಲಿ 15 ದಿನಗಳಿಂದ ಕೆಟ್ಟುನಿಂತಿದೆ.ತಾಲೂಕು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಐ ವಿಲ್ ಅಪ್ಡೇಟ್ ಯೂ ಎಂದು ಮೆಸೇಜ್‌ಗೆ ರಿಪ್ಲೈ ಮಾಡಿ ಕುಳಿತಿದ್ದಾರೆ. ಸಾರ್ವಜನಿಕರು ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ಸಿಗುವಂತಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ತಾಲೂಕಿನ ಪೊಲಂಪಲ್ಲಿ ಗ್ರಾಮದಲ್ಲಿ ಮನೆಯ ಛಾವಣಿ ಕುಸಿದು ವೃದ್ಧೆಯೊಬ್ಬರು ಪ್ರಜ್ಞೆ ತಪ್ಪಿದ್ದರು. ಅವರನ್ನು ರಕ್ಷಿಸಿದ್ದ ಸ್ಥಳೀಯರು, ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ಹಲವು ಗಂಟೆಗಳ ಬಳಿಕ ಬಂದ ಆಂಬುಲೆನ್ಸ್‌ನಲ್ಲಿ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಡಾ. ವಿಜಯಲಕ್ಷ್ಮೀ, ಆಡಳಿತ ವೈದ್ಯಾಧಿಕಾರಿ15 ದಿನಗಳ ಹಿಂದೆ ಆಂಬುಲೆನ್ಸ್‌ನ ಇಂಜಿನ್‌ನಲ್ಲಿ ಸಮಸ್ಯೆ ಕಂಡುಬಂದಿದೆ. 108 ಆಂಬುಲೆನ್ಸ್ ನಮ್ಮ ಸಾರ್ವಜನಿಕ ಆಸ್ಪತ್ರೆ ನಿರ್ವಹಣೆಗೆ ಒಳಪಡುವುದ್ಲಿ. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳೇ ನಿರ್ವಹಿಸುವುದರಿಂದ, ಅವರಿಗೆ ಮಾಹಿತಿ ನೀಡಲಾಗಿದೆ. 15 ದಿನಗಳಿಂದ ಆಂಬುಲೆನ್ಸ್ ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ. ಬುಧವಾರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು. ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ ಮಂಜುನಾಥ್, ಮಾಜಿ ತಾಪಂ ಸದಸ್ಯ, ಪೊಲಂಪಲ್ಲಿ ಪೊಲಂಪಲ್ಲಿಯಲ್ಲಿ ಮನೆ ಕುಸಿದ ಪರಿಣಾಮ ಪ್ರಜ್ಞೆ ತಪ್ಪಿದ ಮಹಿಳೆಯನ್ನು ಆಸ್ಪತ್ರೆಗೆ ಕೆರದೊಯ್ಯಲು ಆಂಬ್ಯುಲೆನ್ಸ್ ತಡವಾಗಿ ಬಂದಿತ್ತು. ಕೆಟ್ಟು ನಿಂತಿರುವ ಆಂಬುಲೆನ್ಸ್ ದುರಸ್ತಿಗೊಳಿಸುವ ಬಗ್ಗೆ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ತುರ್ತು ಚಿಕಿತ್ಸೆಗೆ ಬಹಳ ತೊಂದರೆಯಾಗಿದೆ. ಆಂಬುನ್ಸ್ ಕೆಟ್ಟಿರುವ ವಿಷಯ ಗಮನಕ್ಕೆ ಬಂದ್ಲಿ. ನಿರ್ವಹಣೆ ಮಾಡುವ ಸಂಸ್ಥೆಗೆ ದುರಸ್ತಿ ಮಾಡಲು ಪತ್ರ ಬರೆಯಲಾಗುವುದು. ಡಾ. ನರಸಿಂಹಮೂರ್ತಿ, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net