ರಿವರ್ಸ್ ತೆಗೆಯುತ್ತಿದ್ದ ವೇಳೆ ಉರುಳಿ ಬಿದ್ದ ಆಂಬುಲೆನ್ಸ್

ambulance
Published on

ಮಂಗಳೂರು: ನಗರದ ಫಳ್ನೀರ್‌ನ ಖಾಸಗಿ ಆಸ್ಪತ್ರೆ ಬಳಿ ಸೋಮವಾರ ಮಧ್ಯಾಹ್ನ ಆಂಬುಲೆನ್ಸ್ ರಿವರ್ಸ್ ತೆಗೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ 7-8 ಅಡಿ ಆಳಕ್ಕೆ ಉರುಳಿ ಬಿದ್ದಿದೆ.

ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಹೊರತು ಪಡಿಸಿ ಯಾವುದೇ ಅಪಾಯ ಸಂಭವಿಸಿಲ್ಲ. ಆಂಬುಲೆನ್ಸ್‌ನಲ್ಲಿ ಚಾಲಕನನ್ನು ಹೊರತು ಪಡಿಸಿ ಯಾರೂ ಇರಲಿಲ್ಲ. ಒಳರಸ್ತೆಯಿಂದ ಮುಖ್ಯರಸ್ತೆಗೆ ಬರಲು ರಿವರ್ಸ್ ತೆಗಯುತ್ತಿದ್ದಾಗ ತೀರಾ ಎಡಕ್ಕೆ ಬಂದ ಆಂಬುಲೆನ್ಸ್ ಕಟ್ಟಡವೊಂದರ ಆವರಣಗೋಡೆಗೆ ತಾಗಿ ನೆಲಕ್ಕೆ ಬಿದ್ದಿದೆ. ಪರಿಣಾಮ ಆಂಬುಲೆನ್ಸ್ ನಜ್ಜುಗುಜ್ಜಾಗಿದ್ದು, ನೆಲಕ್ಕೆ ಬಿದ್ದ ಜಾಗದಲ್ಲಿ ನಿಲ್ಲಿಸಲಾಗಿದ್ದ 3 ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net