ಆಂಬುಲೆನ್ಸ‌ಗೆ ಬೆಂಕಿಯಿಟ್ಟವರಿಗೂ ಸೋಂಕು

corona
Published on

ಬೆಳಗಾವಿ: ಇತ್ತೀಚೆಗೆ ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಬೆಳಗಾವಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಬಂಧನಕ್ಕೊಳಗಾದ 11 ಆರೋಪಿಗಳಿಗೆ ಕರೊನಾ ಸೋಂಕು ದೃಢವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿ 14 ಆರೋಪಿಗಳನ್ನು ಬಂಧಿಸಲಾಗಿತ್ತು. ಇವರನ್ನು ಹಿಂಡಲಗಾ ಜೈಲಿಗೆ ಕಳುಹಿಸುವ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಇವರಲ್ಲಿ ಹನ್ನೊಂದು ಜನರಿಗೆ ಸೋಂಕು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೆ ಏಳು ಜನರ ಬಂಧನ: ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಮತ್ತೆ 7 ಜನರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 22ಕ್ಕೇರಿದೆ. ಜಾಲಗಾರ ಗಲ್ಲಿಯ ದಾನೀಶ್ ಚಾಂದವಾಲೆ, ರದಿನ್ ದೇಸಾಯಿ, ಆಸ್ೀಖಾನ್ ಪಠಾಣ, ಜಾಹೀದ್ ಬೋಜಗಾರ, ಗಾಂಧಿನಗರದ ಅರ್ಷದ್ ಮನಿಯಾರ್, ಘೀ ಗಲ್ಲಿಯ ಜಲ್‌ಮುಲ್ಲಾ ಹಾಗೂ ಚಿರಾಗ ನಗರದ ಸಲ್ಮಾನ್ ಹೊಂಗಲ್ ಬಂಧಿತರು. ಘಟನೆ ಹಿನ್ನೆಲೆಯಲ್ಲಿ ಈ ಮೊದಲು 15 ಜನರನ್ನು ಬಂಧಿಸಿ, ಎಪಿಎಂಸಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net