

ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್‌ನಿಂದ ಸಮುದಾಯ ಆರೋಗ್ಯ ಸೇವೆ ಅಡಿಯಲ್ಲಿ ರೋಟರಿ ಪಶ್ಚಿಮಕ್ಕೆ ಆಂಬುಲೆನ್ಸ್ ಅನ್ನು ಇತ್ತೀಚೆಗೆ ಕೊಡುಗೆಯಾಗಿ ನೀಡಲಾಯಿತು.
ರೋಟರಿ ಪಶ್ಚಿಮದ ಸಮುದಾಯ ಆರೋಗ್ಯ ನಿರ್ದೇಶಕ ಡಾ. ಎಂ.ಆರ್.ರೇಣುಕಾಪ್ರಸಾದ್ ಅವರ ಕಲ್ಪನೆಯಂತೆ ಮನುಷ್ಯರಲ್ಲಿ ಕಾಣುವ ಡಯಾಬಿಟಿಸ್‌ನಂತಹ ಅಸ್ವಸ್ಥತೆ ಕಂಡುಹಿಡಿಯಲು ವಿಶೇಷ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಅಂಬುಲೆನ್ಸ್ ಮೈಸೂರು ಗ್ರಾಮಾಂತರ ಭಾಗಗಳಲ್ಲಿ ಉಪಯೋಗಿಸಲಾಗುವುದು.
ಮೈಸೂರಿನ ಭಾರತಿಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್‌ನ (ಆರ್‌ಬಿಐ) ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ.ನಾರಾಯಣನ್ ಅವರು ಆಂಬುಲೆನ್ಸ್ ಕೀ ಅನ್ನು ರೋಟರಿ ವೆಸ್ಟ್ ಸಂಸ್ಥೆಯ ಅಧ್ಯಕ್ಷ ಜಿ.ಕೆ.ಸುಧೀಂದ್ರ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಆರ್‌ಬಿಐ ಸಿಎಸ್‌ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಪ್ರಮೋದ್ ಕುಮಾರ್, ರೋಟರಿ ಕಾರ್ಯದರ್ಶಿ ಎಂ.ಎಲ್. ನಾಗೇಶ್, ರೋಟರಿ ಸಂಸ್ಥೆಯ ಚಂದ್ರಬಸವಯ್ಯ, ಸಮುದಾಯ ಆರೋಗ್ಯ ಮುಖ್ಯಸ್ಥ ಡಾ.ಎಂ.ಆರ್.ರೇಣುಕಾಪ್ರಸಾದ್ ಹಾರ್ಟ್ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಇತರರು ಇದ್ದರು.