ವಿವೇಕಾನಂದ ಆಸ್ಪತ್ರೆಗೆ ಆಂಬ್ಯುಲನ್ಸ್​ ವಿತರಣೆ

IMG-20250103-WA0012-1.jpg
Published on

ಹುಬ್ಬಳ್ಳಿ: ಕರ್ನಾಟಕ ಬ್ಯಾಂಕ್ ಸಿಎಸ್ ಆರ್ ನಿಧಿ ಅಡಿ ಅಡ್ವಾನ್ಸ್ ಲೈಫ್ ಸಪೋರ್ಟ್ (ಎಎಲ್ಎಸ್) ಆಂಬ್ಯುಲನ್ಸ್ ಅನ್ನು ಇಲ್ಲಿಯ ವಿವೇಕಾನಂದ ಜನರಲ್ ಆಸ್ಪತ್ರೆಗೆ ದೇಣಿಗೆ ನೀಡಲಾಯಿತು.

ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಮಾರು 32 ಲಕ್ಷ ರೂ. ಮೌಲ್ಯ ಎಎಲ್ಎಸ್ ಆಂಬ್ಯುಲನ್ಸ್ ಇದಾಗಿದೆ. ವಿವೇಕಾನಂದ ಆಸ್ಪತ್ರೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಇದನ್ನು ಸ್ವೀಕರಿಸಿ ಧನ್ಯವಾದ ಅರ್ಪಿಸಿದರು.

ಆಸ್ಪತ್ರೆಯ ಚೇರ್ಮನ್ ಕಮಲನಯನ ಮೆಹ್ತಾ, ಪ್ರೆಸಿಡೆಂಟ್ ದೀಪಕ ಶಾ, ಉಪಾಧ್ಯಕ್ಷ ಕೇಶವ ದೇಸಾಯಿ, ಟ್ರಸ್ಟಿಗಳಾದ ಶ್ರೀಕಾಂತ ಕೆಮ್ತೂರ, ಈಶ್ವರಲಾಲ ಲದಡ್, ಪ್ರದಿಪ ಸಂವಿ, ಡಾ. ಮುರಳಿಧರ ರಾವ್, ಕರ್ನಾಟಕ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಾಗೂ ಪ್ರಾದೇಶಿಕ ಮುಖ್ಯಸ್ಥ ವಿಶ್ವನಾಥ ಎಸ್.ಆರ್, ಕ್ಲಸ್ಟರ್ ಹೆಡ್ ಸಂಜೀವ, ಎನ್ಸಿಎಂ ಹಿರಿಯ ಶಾಖಾ ವ್ಯವಸ್ಥಾಪಕ ನಾಗೇಂದ್ರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net