ಮೃತ ವ್ಯಕ್ತಿ ಬಳಿಯಿದ್ದ 3 ಲಕ್ಷ ರೂ. ನಗದನ್ನು ಪೊಲೀಸರಿಗೆ ಒಪ್ಪಿಸಿ ಕರ್ತವ್ಯ ನಿಷ್ಠೆ ಮೆರೆದ ಆಂಬುಲೆನ್ಸ್ ಸಿಬ್ಬಂದಿ

Humanitty
Published on

ಬೀದರ್​: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಇದ್ದ 3 ಲಕ್ಷ ರೂಪಾಯಿಯನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಆಂಬುಲೆನ್ಸ್​ ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಬೀದರ್​ ನಗರ ವಲಯದ ಪಶು ವಿಶ್ವವಿದ್ಯಾಲಯದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸುಲೇಪೆಟನ ಗಣಪತಿ ಪ್ರಸಾದ (40) ಸ್ಥಳದಲ್ಲೇ ಮೃತಪಟ್ಟರು. ಈ ವೇಳೆ ಮೂವರಿಗೆ ಗಂಭೀರ ಗಾಯಗಳಾಗಿದ್ದವು.

ಮೃತ ಗಣಪತಿ ಪ್ರಸಾದ ಬಳಿ ಇದ್ದ 3 ಲಕ್ಷ ಹಣವನ್ನು ಆಂಬುಲೆನ್ಸ್​ ಸಿಬ್ಬಂದಿಗಳಾದ ಓಂಕಾರ ಮತ್ತು ಇಮ್ಯಾನವೇಲ್ ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮತ್ತು ಕರ್ತವ್ಯ ನಿಷ್ಠೆ ಮೆರದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net