ಅಂಬುಜಾ ಐಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಅಂಬುಜಾ ಉದಯಶಂಕರ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಬಿ.ಎಂ. ಕಿರಣ್, ಕಾಯಿ ಮಂಜೇಗೌಡ, ಐಕನಹಳ್ಳಿ ಕೃಷ್ಣೇಗೌಡ, ಮಲ್ಲೇಶ್ ಇದ್ದರು.
ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಅಂಬುಜಾ ಉದಯಶಂಕರ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಬಿ.ಎಂ. ಕಿರಣ್, ಕಾಯಿ ಮಂಜೇಗೌಡ, ಐಕನಹಳ್ಳಿ ಕೃಷ್ಣೇಗೌಡ, ಮಲ್ಲೇಶ್ ಇದ್ದರು.
Published on

ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅಂಬುಜಾ ಉದಯಶಂಕರ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್.ಕೆ.ಸುಧಾ ದೇವರಾಜು ಒಡಂಬಡಿಕೆಯಂತೆ ರಾಜೀನಾಮೆ ನೀಡಿದ್ದರು.  ಚುನಾವಣಾ ಪ್ರಕ್ರಿಯೆಯಲ್ಲಿ ಅಂಬುಜಾ ಉದಯಶಂಕರ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಂತೋಷ್‌ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು. ತಾಪಂ ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಒ ಬಿ.ಎಸ್. ವಿಜಯ್, ಕಾರ್ಯದರ್ಶಿ ಪ್ರಭುನಂದ ಕರ್ತವ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷೆ ಅಂಬುಜಾ ಉದಯಶಂಕರ್ ಮಾತನಾಡಿ, ನರೇಗಾ ಯೋಜನೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸೌಕರ್ಯ ಕಲ್ಪಿಸಲಾಗುವುದು ಎಂದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಕಿರಣ್, ಕೆಪಿಎಸ್ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಐನೋರಹಳ್ಳಿ ಮಲ್ಲೇಶ್ ಶುಭ ಕೋರಿದರು.

ಗ್ರಾಪಂ ಸದಸ್ಯರಾದ ನಂಜುಡೇಗೌಡ, ಈರಾಜು, ಕುಮಾರ್, ದೇವರಾಜು, ಪ್ರಸನ್ನ, ಮಂಜೇಗೌಡ, ಶಂಕರ್, ಸುಧಾ, ಸುಮಿತ್ರಾ, ಕವಿತಾ, ಸುವರ್ಣಾ, ಪಲ್ಲವಿ, ಭಾಗ್ಯಮ್ಮ, ನಾಗಮಣಿ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net