ಬಿರುಕು ಬಿಟ್ಟ ಅಂಬ್ಲಿಕೊಪ್ಪ ಸೇತುವೆ

web 2
Published on

ಧಾರವಾಡ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಕೆರೆ- ಕಟ್ಟೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಅತಿಯಾದ ಮಳೆಯಿಂದ ಅಂಬ್ಲಿಕೊಪ್ಪ ಬಳಿಯ ಬೇಡ್ತಿ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ಅಂಬ್ಲಿಕೊಪ್ಪ- ಡೊಂಬ್ರಿಕೊಪ್ಪ ಗ್ರಾಮಗಳ ನಡುವಿನ ಸೇತುವೆ ಬಿರುಕು ಬಿಟ್ಟಿದೆ.
ಈ ಎರಡೂ ಗ್ರಾಮಗಳನ್ನು ಸಂಪರ್ಕಿಸಲು ಬೇಡ್ತಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದೆ. ಅಂಬ್ಲಿಕೊಪ್ಪ ಮಾರ್ಗವಾಗಿ ಕಲಘಟಗಿ ಪಟ್ಟಣವನ್ನು ಇದೇ ರಸ್ತೆ ಮೂಲಕ ಸಂಪರ್ಕಿಸಬಹುದು. ನಿರಂತರ ಮಳೆಯಿಂದ ಹಳ್ಳ ಆಗಾಗ ತುಂಬಿ ಹರಿಯುತ್ತಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಗ್ರಾಮಸ್ಥರು ಬೈಕ್, ಕಾರು, ಟ್ರ್ಯಾಕ್ಟರ್‌ಗಳಲ್ಲಿ ಆತಂಕದಲ್ಲೇ ಸಂಚರಿಸುತ್ತಿದ್ದಾರೆ.
ಅತಿಯಾದ ಮಳೆಯಾಗುತ್ತಲೆ ಹಳ್ಳ ರಸ್ತೆ ಮೇಲೆ ತುಂಬಿ ಹರಿಯುತ್ತಿದೆ. ಇದರಿಂದ ಗ್ರಾಮಸ್ಥರು ನೀರಿನ ರಭಸ ಕಡಿಮೆಯಾಗುವವರೆಗೆ ಗಂಟೆಗಟ್ಟಲೇ ಕಾದು ನಿಲ್ಲಬೇಕಾಗಿದೆ. ಬಿರುಕು ಬಿಟ್ಟ ಸೇತುವೆಯನ್ನು ತೆರವುಗೊಳಿಸಿ ಪುನರ್ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net