ಯಶಸ್ಸಿಗೆ ಮಹತ್ವಾಕಾಂಕ್ಷೆಯ ಗುರಿ ಅವಶ್ಯ: ಎ.ಮಣಿಮೇಖಲೈ

21
Published on

ಮೈಸೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಮಣಿಮೇಖಲೈ ಅವರ ನೇತೃತ್ವದಲ್ಲಿ ನಗರದ ‘ಅಜಿತ ನೆಲೆ’ಯಲ್ಲಿ ಎಂಪವರ್ ಹರ್ ಎಂಬ ಶೀರ್ಷಿಕೆ ಅಡಿಯಲ್ಲಿ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೆಲೆ ಫೌಂಡೇಶನ್‌ನ ಕಾಳಜಿಯಲ್ಲಿ ಇರುವ 20ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಯಶಸ್ಸು ಸಾಧಿಸಲು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿರುವುದು ಮಕ್ಕಳಿಗೆ ಅತ್ಯವಶ್ಯಕ ಮತ್ತು ಮಹಿಳಾ ಸಬಲೀಕರಣವು ಅವರ ನೆಚ್ಚಿನ ಗುರಿಯತ್ತ ಸಾಗಲು ರೆಕ್ಕೆಗಳನ್ನು ನೀಡುತ್ತದೆ ಎಂದು ಎ. ಮಣಿಮೇಖಲೈ ಹೇಳಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೆಲೆ ಫೌಂಡೇಶನ್‌ಗೆ 25 ಸಾವಿರ ರೂ. ದೇಣಿಗೆ ನೀಡಿ, ಮಕ್ಕಳಿಗೆ ಸ್ಮರಣಿಕೆ ವಿತರಿಸಿದರು. ವಲಯ ಮುಖ್ಯಸ್ಥ ನವ್ನೀತ್ ಕುಮಾರ್, ಮೈಸೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಸುನೀಲ್ ವಿ. ಪಾಟೀಲ, ನೆಲೆ ಫೌಂಡೇಷನ್ ಸಂಸ್ಥಾಪಕ ಟ್ರಸ್ಟಿ ವಿನೋದ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net