ಅಂಬಿಕಾ ಮಂಜುನಾಥ್ ದೊಡ್ಡಬೇಲಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ

ದೊಡ್ಡಬೆಲೆ ಗ್ರಾಮ ಪಂಚಾಯಿತಿಅಧ್ಯಕ್ಷರಾಗಿ ಅಂಬಿಕಾ ಮಂಜನಾಥ್ ಅವಿರೋಧವಾಗಿ ಆಯ್ಕೆಯಾದರು.
ದೊಡ್ಡಬೆಲೆ ಗ್ರಾಮ ಪಂಚಾಯಿತಿಅಧ್ಯಕ್ಷರಾಗಿ ಅಂಬಿಕಾ ಮಂಜನಾಥ್ ಅವಿರೋಧವಾಗಿ ಆಯ್ಕೆಯಾದರು.
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅಂಬಿಕಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.

ಬಿ.ಎಲ್.ಅನಿತಾ ಅವರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿದ್ದರು. ತೆರವಾದ ಸ್ಥಾನಕ್ಕೆ  ಚುನಾವಣೆ ನಿಗದಿಯಾಗಿತ್ತು. ಅಂಬಿಕಾ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ರವಿಪ್ರಸನ್ನ ಅವಿರೋಧ ಆಯ್ಕೆ ಘೋಷಿಸಿದರು.

ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಇಂದ್ರೇಶ್, ಜಾನಕಮ್ಮ, ಮಾಯಾವತಿ, ಸುರೇಶ್, ಸೈಯದ್ ಅಬ್ಬಾಸ್, ಸೈಯದ್ ಜವೇರಿಯ, ಶಿಲ್ಪಾ, ಎಂ.ಟಿ.ಕುಮಾರ್, ನಾಗರಾಜ್, ಶಶಿಕಲಾ, ಸಬಿನಕುಮಾರ್, ದಿನೇಶ್, ಸ್ವಾಮಿಗೌಡ, ಗಾಯತ್ರಿ ಹಾಜರಿದ್ದರು. 21 ಸದಸ್ಯರಲ್ಲಿ 18 ಸದಸ್ಯರು ಹಾಜರಿದ್ದು, ಸದಸ್ಯರಾದ ಅನಿತಾ, ಲತಾ, ಗಣೇಶ್ ಗೈರಾಗಿದ್ದರು.

ಪಿಡಿಒ ರಾಮಾರಾಧ್ಯ, ಕಾರ್ಯದರ್ಶಿ ಮಹಾದೇವ್, ಸಿಬ್ಬಂದಿ ಮಹದೇವ ನಾಯಕ, ಪ್ರಕಾಶ್, ಮಧು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net