ನಿಷ್ಟುರ ವಚನಕಾರ ಅಂಬಿಗರ ಚೌಡಯ್ಯ

h21-ambigar choudayya
Published on

ಹುಬ್ಬಳ್ಳಿ: ನಿಜಶರಣ ಅಂಬಿಗರ ಚೌಡಯ್ಯನವರು ಇದ್ದದ್ದನ್ನು ಇದ್ದಹಾಗೆ ಹೇಳಿರುವ ನಿರಂಕುಶಮತಿ. ನಿಷ್ಟುರ ವಚನಕಾರ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಅಭಿಪ್ರಾಯಪಟ್ಟರು.

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣಾ ಸಮಿತಿ ವತಿಯಿಂದ ಇಲ್ಲಿಯ ಭೈರಿದೇವರಕೊಪ್ಪ ಎಪಿಎಂಸಿ ಬಸವ ಕಾಲನಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಯಕ ಜೀವಿಗಳು, ಬಡವರನ್ನು ಮೇಲೆತ್ತುವುದರಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ಅವರು ಮೌಢ್ಯ ತಿರಸ್ಕರಿಸಿ ಏಕದೇವೋಪಾಸನೆಯ ಪರಮನಿಷ್ಟರಾಗಿದ್ದರು. ಆಚಾರ ಹೇಳುತ್ತ ದ್ವಂದ್ವ ಜೀವನ ನಡೆಸುವವರ ವಿರುದ್ಧ ಧ್ವನಿ ಎತ್ತಿದ್ದರು. ಅವರ ಬದುಕು ಮತ್ತು ವಚನಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದರು.

ಕಾಲನಿ ಮುಖಂಡರಾದ ಹನುಮಂತಪ್ಪ ಪೂಜಾರ, ಹನುಮಂತ ಅಂಬಿಗೇರ, ಶಿವರಾಜ ಹುಜರಾತಿ, ದುರ್ಗಪ್ಪ ಚಿಕ್ಕತುಂಬಳ, ಸೈದಪ್ಪ ಅಂಬಿಗೇರ, ಯಲ್ಲಮ್ಮ ಅಂಬಿಗೇರ, ಮಲ್ಲಮ್ಮ ಅಂಬಿಗೇರ, ಹಮಾಲಿ ಸಂಘದ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಮಂಜುನಾಥ ಅಂಬಿಗೇರ, ಬಸವರಾಜ ಅಂಬಿಗೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net