ಚೌಡಯ್ಯ ಶರಣ ಸಂಸ್ಕೃತಿ ಉತ್ಸವ 14, 15ರಂದು

Basavaraj Sappangool
Published on

ಕಲಬುರಗಿ: ಹಾವೇರಿ ಜಿಲ್ಲೆಯ ನರಸೀಪುರದಲ್ಲಿ ಜ.14 ಮತ್ತು 15ರಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ೬ನೇ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾಮಹೋತ್ಸವ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಬಸವರಾಜ ಸಪ್ಪನಗೋಳ ಹೇಳಿದರು.

ಶ್ರೀನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಶರಣ ಸಂಸ್ಕೃತಿ ಉತ್ಸವ, ಶ್ರೀ ಶಾಂತಮುನಿ ಸ್ವಾಮೀಜಿ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಪೀಠಾರೋಹಣ ಉತ್ಸವ, ಸಾಮೂಹಿಕ ವಿವಾಹ ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.೧೪ರಂದು ಬೆಳಗ್ಗೆ ೬ಕ್ಕೆ ತೊಟ್ಟಿಲೋತ್ಸವ, ೮ಕ್ಕೆ ಚೌಡಯ್ಯನವರ ಗದ್ದುಗೆ ಪೂಜೆ, ಬೆಳಗ್ಗೆ ೧೧ಕ್ಕೆ ರಕ್ತದಾನ ಶಿಬಿರ, ಮಧ್ಯಾಹ್ನ ೧.೩೦ಕ್ಕೆ ವಚನ ಕಂಠಪಾಠ ಸ್ಪರ್ಧೆ, ಸಂಜೆ ೫.೩೦ಕ್ಕೆ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಉತ್ಸವವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿz್ದÁರೆ. ಸಚಿವ ಮಂಗಾಳ ವೈದ್ಯ, ಶಾಸಕ ಪ್ರಕಾಶ ಕೋಳಿವಾಡ ಸೇರಿ ಗಣ್ಯರು, ಪೂಜ್ಯರು ಭಾಗವಹಿಸಲಿದ್ದಾರೆ ಎಂದರು.

ಜ.15ರಂದು ಬೆಳಗ್ಗೆ ೮ಕ್ಕೆ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರರಿಂದ ಧರ್ಮ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಸಾಮೂಹಿಕ ವಿವಾಹ, ೧೦ಕ್ಕೆ ಧರ್ಮ ಸಭೆ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಶ್ರೀ ಚೌಡಯ್ಯನವರ ೬ನೇ ಶರಣ ಸಂಸ್ಕೃತಿ ಉತ್ಸವ, ೯೦೪ನೇ ಜಯಂತ್ಯುತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿz್ದÁರೆ. ಡಿಸಿಎಂ ಡಿ.ಕೆ.ಶಿವಕುಮಾರ ಗ್ರಂಥ ಬಿಡುಗಡೆ ಮಾಡಲಿz್ದÁರೆ.
ಪ್ರಮುಖರಾದ ಪಿಡ್ಡಪ್ಪ ಜಾಲಗಾರ, ವಿದ್ಯಾಧರ ಮಂಗಳೂರು, ಪಿತಾಂಬರ ಕೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net