

ಗದಗ: ನಗರದ ಸಂಭಾಪುರ ರಸ್ತೆಯಲ್ಲಿ ಜ.21 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾಡಳಿತ, ಕನ್ನಡ ಸಂಸತಿ ಇಲಾಖೆ ಮತ್ತು ಅಂಬಿಗರ ಚೌಡಯ್ಯ ವಿವಿಧೋದ್ದೇಶ ಸೇವಾ ಟ್ರಸ್ಟ್ ಆಶ್ರಯದಲ್ಲಿ ಅಂಬಿಗರ ಚೌಡಯ್ಯ ನವರ ಜಯಂತಿ ಮತ್ತು ಕಾರ್ಯಾಲಯ ಉದ್ಘಾಟನೆ ಜರುಗಲಿದೆ ಎಂದು ಅಂಬಿಗ ಚೌಡಯ್ಯ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎನ್. ಯರನಾಳ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸುವ ಕುರಿತು ಹಲವು ವರ್ಷಗಳಿಂದ ಆಗ್ರಹಿಸುತ್ತ ಬರಲಾಗಿದೆ. ಜಯಂತಿ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಆಗ್ರಹಿಸಲಾಗುವುದು. ಕೇಂದ್ರ ಸರ್ಕಾರ ಆದಷ್ಟು ಬೇಗ ಮೀಸಲಾತಿ ನೀಡಬೇಕು ಎಂದು ಹೇಳಿದರು
ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಸಾನ್ನಿಧ್ಯವನ್ನು ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಶಂಕರಾನಂದ ಶ್ರೀಗಳು ವಹಿಸುವರು. ಶಾಸಕ ಎಸ್.ವಿ. ಸಂಕನೂರು, ಸಭಾಪತಿ ಬಸವರಾಜ ಹೊರಟ್ಟಿ ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಇರುವರು ಎಂದರು.
ಸುದ್ದಿಗೋಷ್ಟಿಯಲ್ಲಿ ರಮೇಶ ಯತ್ತಿನ, ಜೆ.ಬಿ. ಧಾರವಾಡ, ಬಿ.ಜಿ. ಬಾರಕೇರ, ಸಿ.ಬಿ. ಬಾರಕೇರ, ಕಾಶಪ್ಪ ಬಳಗಾನೂರ, ಶಿವಾನಂದ ಬನಹಟ್ಟಿ, ಮಾಲತೇಶ ಬಾಕಿರ್, ಮಂಜುನಾಥ ಸುಣಗಾರು ಹಲವರು ಇದ್ದರು.