

ಸೊರಬ: ಕಾಯಕ ನಿಷ್ಠೆ ಮೆರೆದು ನಿಜಶರಣ ಎಂದು ಕರೆಸಿಕೊಂಡಿದ್ದ ಅಂಬಿಗರ ಚೌಡಯ್ಯ ಅವರು ರಚಿಸಿದ ಸಾವಿರಾರು ವಚನಗಳಲ್ಲಿ 330 ವಚನಗಳು ಲಭ್ಯವಾಗಿವೆ ಎಂದು ಸಹಾಯ ಪ್ರಾಧ್ಯಾಪಕ ಡಾ. ಮಹಾದೇವಪ್ಪ ರಂಗಣ್ಣನವರ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ಅಂಬಿಗರ ಚೌಡಯ್ಯ ವಚನಗಳ ಮೂಲಕ ಸಮಾಜದಲ್ಲಿ ಹೊಸ ಚಿಂತನೆ ಬಿತ್ತಿದ್ದಾರೆ ಎಂದರು.
ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಉದ್ಘಾಟಿಸಿ ಮಾತನಾಡಿದರು. ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ವೀರೇಶ್ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಧಾನ ಕಾರ್ಯದರ್ಶಿ ನೀಲಪ್ಪ, ತಹಸೀಲ್ದಾರ್ ಹುಸೇನ್ ಸರಕಾವಸ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಮಾಲತೇಶ್, ನಾಗರಾಜ್, ಸಹಾಯಕ ಗ್ರಂಥಪಾಲಕ ಟಿ.ಜಿ.ಕೃಷ್ಣಮೂರ್ತಿ ಇತರರಿದ್ದರು. ಸಮಾಜದ ಕಾರ್ಯದರ್ಶಿ ಚಿರಂಜೀವಿ ಸ್ವಾಗತಿಸಿದರು. ಶಿಕ್ಷಕ ಕೇಶವ ನಿರೂಪಿಸಿದರು. ವಿನೋದ್ ವಾಲ್ಮೀಖಿ ಕವನ ವಾಚಿಸಿದರು.