

ಗದಗ: ನಗರದ ರಂಗನವಾಡ ಓಣಿಯ ಅಂಬಿಗ ಯುವ ಸೇನಾ ಸಂಘಟನೆ ವತಿಯಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭವು ಯಶಸ್ವಿಯಾಗಿ ಜರುಗಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಜೆ.ಬಿ. ಗಾರವಾಡ, ಡಾ. ಗಣೇಶ ಸುಲ್ತಾನಪುರ, ಶ್ರೀಮತಿ ಯಶೋಧ ಜಾಲಗಾರ ದೀಪ ಬೆಳಗಿಸುವುದರ ಮೂಲಕ ಸಮಾರಂಭ ಉದ್ಘಾಟಿಸಿದ ಅತಿಥಿಗಳು ಮಾತನಾಡಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ತತ್ವ ಮೌಲ್ಯಯುತ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಹೇಳಿದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟಿನ ಅಧ್ಯಕ್ಷ ಜೆ.ಬಿ. ಗಾರವಾಡ ಮಾತನಾಡಿ ನಮ್ಮ ಜಿಲ್ಲಾ ಮಟ್ಟದ ಸಂಘಟನೆಯಲ್ಲಿ ಯುವಕರು ಮಹಿಳೆಯರು ಹೆಚ್ಚು ಹೆಚ್ಚು ಸದಸ್ಯತ್ವ ಪಡೆಯಲು ಮುಂದಾಗಬೇಕು ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಸೇವಾ ಸಮರ್ಪಣ ಭಾವದಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಮುಖಂಡ ಡಾ. ಗಣೇಶ ಸುಲ್ತಾನಪುರ ಮಾತನಾಡಿ ಸಂಘಟನೆ ಮಾಡಿದರೆ ಆ ಮೂಲಕ ಹಿಂದುಳಿದ ಗಂಗಾಮತ ಸಮಾಜದ ಬಡ ಕುಟುಂಬಗಳಿಗೆ, ಸ್ವ-ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಟಗೇರಿಯ ಅಂಬಿಗರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಯಶೋಧಾ ಜಾಲಗಾರ ಅವರು ಮಹಿಳೆಯರ ಉದ್ದೇಶಿಸಿ ಮಾತನಾಡುತ್ತಾ ಮಹಿಳಾ ಸಂಘದ ರಚನೆಯ ಕುರಿತು ಮಾರ್ಗದರ್ಶನ ಮಾಡಿದರು.
ವೇದಿಕೆಯ ಮೇಲೆ ಕರಿಯಪ್ಪ ಗುಡಿಸಾಗರ, ಕಲ್ಲಪ್ಪ ಬಾರಕೇರ ಉಪಸ್ಥಿತರಿದ್ದರು.
ರಂಗನವಾಡ ಅಂಬಿಗ ಚೌಡಯ್ಯ ಯುವ ಸೇನಾ ಪದಾಧಿಕಾರಿಗಳಾದ ವಿನೋದ ಜಕನೂರ, ಸುನೀಲ ಮಾನ್ವಿ, ಕೃಷ್ಣ ಬಾರಕೇರ, ನೀಲಕಂಠ ಗುಡಿಸಾಗರ, ರಾಜು ಬಾರಕೇರ, ಹನಮಂತ ಮಾನ್ವಿ, ಸುನಿಲ ಮಾನ್ವಿ, ಪರಶುರಾಮ ಬಾರಕೇರ, ಕೃಷ್ಣ ಬಾರಕೇರ, ವಿನೋದ ಜಕನೂರ, ಕಿರಣ ಮಾನ್ವಿ, ಯಲ್ಲಪ್ಪ ಬಾರಕೇರ, ರಾಘವೇಂದ್ರ ಜಕನೂರ, ನಾಗರಾಜ ಬಾರಕೇರ, ನೀಲಕಂಠ ಗುಡಿಸಾಗರ, ಚೇತನ ಮಾನ್ವಿ, ಸಾಗರ ಮಾನ್ವಿ, ಕಾರ್ತಿಕ ಮಾನ್ವಿ, ರೋಹಿತ್ ಜಕನೂರ, ಪ್ರಜ್ವಲ್ ಬಾರಕೇರ, ಮಂಜು ಮಲ್ಲಾಪೂರ, ರಾಮು ಬಾರಕೇರ, ಶಂಕರ ಬಾರಕೇರ, ಧನುಷ ಬಾರಕೇರ, ತೇಜಸ್ ಬಾರಕೇರ, ನಾಗರಾಜ ಮಡ್ಡಿ, ಪ್ರದೀಪ ದೇವಗಿರಿ, ಬಸವರಾಜ ಜಿಗಳೂರ, ರವಿ ಜಾಲವಾದಿ, ಸಂಜು ಮಲ್ಲಾಪೂರ, ಉಡಚಮ್ಮ ಮಾನ್ವಿ, ಬಸವಣೆವ್ವ ಬಾರಕೇರ, ಯಲ್ಲಮ್ಮ ಮಡ್ಡಿ, ಪಾರವ್ವ ಜನಕೂರ, ರೇಣುಕಾ ಮಾನ್ವಿ, ಮಂಜುಳಾ ಮಾನ್ವಿ, ಶಾಂತಾ ಮಾನ್ವಿ, ಕಮಲವ್ವ ಮಲ್ಲಾಪೂರ, ಸುಜಾತಾ ಬಾರಕೇರ, ರೇಖಾ ಬಾರಕೇರ, ಶಾಂತಮ್ಮ ಮಾನ್ವಿ, ಪುಷ್ಪಾ ಬಾರಕೇರ, ಸುನಿತಾ ಮನಗೂಳಿ, ಪುಷ್ಪಾ ಜಕನೂರ, ಶೀಲಾ ಜಕನೂರ, ಸರಸ್ವತಿ ಜಕನೂರ, ಕೀರ್ತಿ ಜಕನೂರ, ಕವಿತಾ ಬಾರಕೇರ, ದೀಪಾ ಮಡ್ಡಿ, ಸಹನಾ ಮಾನ್ವಿ, ಪರಶುರಾಮ ಜಕನೂರ, ಪರಶುರಾಮ ಮಾನ್ವಿ, ವೆಂಕಟೇಶ ಬಾರಕೇರ, ನಿಂಗರಾಜ ಬಾರಕೇರ, ಸಂಜು ಮಲ್ಲಾಪೂರ ಮುಂತಾದವರು ಕಾರ್ಯಕ್ರಮ ಸಂಘಟಿದ್ದರು.
ಓಣಿಯ ಹಿರಿಯರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರೀತಮ್ ಬಾರಕೇರ, ಪ್ರಜ್ವಲ್ ಬಾರಕೇರ ವಚನ ಗೀತೆಗಳನ್ನು ಹೇಳಿದರು. ಕಮಲಾಬಾಯಿ ಮಲ್ಲಾಪೂರ ರವರು ಪ್ರಾರ್ಥಿಸಿದರು. ವಿನೋದ ಜಕನೂರ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು.