ಅಂಬಿಗರನ್ನು ಎಸ್ ಟಿ ಸೇರಿಸಲು ಒತ್ತಾಯ

17GDG05
Published on

ಗದಗ: ಅಂಬಿಗರ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಆ. 18ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಂಬಿಗರ ಸಮಾಜದ ಒಕ್ಕೂಟದ ಸಂಚಾಲಕ ಸಂಗಮೇಶ ಹಾದಿಮನಿ ಹೇಳಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಿಗರ ಸಮಾಜದ ಮುಖಂಡ ಶಿವಾಜಿ ಮೆಟಗಾರ ನೇತೃತ್ವದಲ್ಲಿ ನಡೆಯುವ ಹೋರಾಟದಲ್ಲಿ ಜಿಲ್ಲೆಯ ಎಲ್ಲ ತಾಲೂಕು, ಗ್ರಾಮಗಳಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಅಂಬಿಗರ ಸಮಾಜ ತುಳಿತಕ್ಕೆ ಒಳಗಾದ ಸಮಾಜ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. 39 ಪರ್ಯಾಯ ಪದಗಳಿಂದ ಗುರುತಿಸಲ್ಪಟ್ಟಿರುವ ಅಂಬಿಗರ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವುದರಿಂದ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ದೊರೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎನ್. ಯರನಾಳ, ಮಹಾದೇವಪ್ಪ ಬಾಣದ, ವಿ.ಜಿ. ಬಾರಕೇರ, ಬಿ.ಎನ್. ಯರನಾಳ, ಸಂಗಮೇಶ ಹಾದಿಮನಿ, ಸುಜಾತಾ ಗುಡಿಸಾಗರ, ಗುರು ತಿರ್ಲಾಪುರ, ಅಮಿತ್ ಪೂಜಾರ, ಪ್ರವೀಣ ನೀಲಣ್ಣವರ, ರಮೇಶ ಬೆಣಕಲ್, ಹರೀಶ ಬಾರಕೇರ, ಹೇಮಂತ ದಳವಾಯಿ, ರವಿ ಗುಡಿಸಾಗರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net