ಅಂಬಿ ಕೃಷ್ಣಮೂರ್ತಿ, ಪೌಲ್ ಕ್ಷೇವಿಯರ್ ಆಯ್ಕೆ

19 vpt 2
ಲಯನ್ಸ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಅಂಬಿ ಕೃಷ್ಣಮೂರ್ತಿ , ಕಾರ್ಯದರ್ಶಿ ಪೌಲ್ ಕ್ಷೇವಿಯರ್ , ಸುಬ್ಬಯ್ಯ.
Published on

ವಿರಾಜಪೇಟೆ : ವಿರಾಜಪೇಟೆ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ವಕೀಲ ಅಂಬಿ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿಯಾಗಿ ವೀರಾಜಪೇಟೆ ಟೆರೇಷಿಯನ್ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಪೌಲ್ ಕ್ಷೇವಿಯರ್ ಆಯ್ಕೆಯಾಗಿದ್ದಾರೆ. 2025-26 ನೇ ಸಾಲಿನಲ್ಲಿ ವೀರಾಜಪೇಟೆ ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ಖಜಾಂಚಿಯಾಗಿ ಮಂಡೇಟಿರ ಸುರೇಶ್, ಉಪಾಧ್ಯಕ್ಷರಾಗಿ ಪಿ.ಪಿ.ಸುಬ್ಬಯ್ಯ, ಎ.ಎ.ಅಜಿತ್ ಹಾಗೂ ಕೆ.ಪಿ.ನಿಯಾಸ್ ಮತ್ತು ನಿರ್ದೇಶಕರಾಗಿ ಕೆ.ಆರ್.ಮೋಹನ್ ರೈ, ಕೆ.ಎಂ.ರಘು ಸೋಮಯ್ಯ, ಎ.ಪಿ.ಪ್ರಸನ್ನ, ಎ.ಪಿ.ಸುಬ್ರಮಣಿ, ಸಿ.ಗಿಲ್ ಸೋಮಯ್ಯ, ಪ್ರತಾಪ್ ಚಿಣ್ಣಪ್ಪ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net