

ಪುತ್ತೂರು; ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತದ್ದಲ್ಲ ಬದಲಿಗೆ ಅದು ಹಲವರ ರಕ್ತ ತರ್ಪಣ, ಬಲಿದಾನಗಳ ಪ್ರತಿಫಲ ಹೀಗಾಗಿ ಅವರ ಸ್ಮರಣೆ ಶಿಕ್ಷಣದ ಜೊತೆ ಜೊತೆಯಲ್ಲಿ ಸಾಗಬೇಕು ಎಂದು ಅಂಬಿಕಾ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ಅಂಬಿಕಾ ವಿದ್ಯಾಸಂಸ್ಥೆ ಬಪ್ಪಳಿಗೆ ಇಲ್ಲಿ ನಡೆದ ದೇಶ ವಿಭಜನೆಯ ಭಯಾನಕ ಸ್ಮರಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜಿಸುವ ಎಷ್ಟೇ ಪ್ರಯತ್ನಗಳು ನಡೆದರೂ ಅದು ಸಾಧ್ಯವಾದದ್ದು ಮಾತ್ರ ಸ್ವಾತಂತ್ರ್ಯ ದೊರೆತ ನಂತರವೇ ಎನ್ನುವುದು ವಿಷಾದಕರ ಸಂಗತಿ. ಅದರ ಪರಿಣಾಮವನ್ನು ದೇಶ ಇಂದಿಗೂ ಅನುಭವಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಹಿಸಿದ್ದರು. ಅಂಬಿಕಾ ವಿದ್ಯಾಲಯದ ಉಪ ಪ್ರಾಂಶುಪಾಲ ಸುಜನಿ ಬೋರ್ಕರ್ ರ್ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ. ಎಸ್. ವಂದಿಸಿದರು.