

ಪುತ್ತೂರು: ಮಕ್ಕಳು ಬೆಳಗ್ಗೆ ಸೂರ್ಯೋದಯದ ಮೊದಲು ಎದ್ದು ತಮ್ಮ ದೈನಂದಿನ ಕಾರ್ಯ ಮುಗಿಸಿ, ದೇವರಿಗೆ ನಮಿಸಿ, ತಂದೆ ತಾಯಿಯ ಆಶೀರ್ವಾದ ಪಡೆದು ತಮ್ಮ ದಿನ ಆರಂಭಿಸಬೇಕು. ನಾವು ಪಶುವಿನಂತಿರದೆ ಮನುಷ್ಯತ್ವದಿಂದ ದೈವತ್ವದೆಡೆಗೆ ನಡೆಯಬೇಕು ಎಂದು ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ ಹೇಳಿದರು.
ಬಪ್ಪಳಿಗೆ ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ತರಗತಿ ಉದ್ಘಾಟಿಸಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಮಾಲತಿ ಡಿ. ಭಟ್, ಸ್ಕೌಟ್ಸ್ ಗೈಡ್ಸ್ ತರಬೇತಿದಾರೆ ಚಂದ್ರಕಲಾ, ಭರತನಾಟ್ಯ ತರಬೇತುದಾರೆ ಪ್ರಿಯಾಶ್ರೀ ಕೆ.ಎಸ್, ಯಕ್ಷಗಾನ ತರಬೇತುದಾರ ಬಾಲಕೃಷ್ಣ ಉಡ್ಡಂಗಳ, ಸತೀಶ್ ಇರ್ದೆ, ಮಾರ್ಷಲ್ ಆರ್ಟ್ಸ್ ತರಬೇತುದಾರ ಶಿವಪ್ರಸಾದ್, ಅಬಾಕಸ್ ತರಬೇತುದಾರೆ ರಾಜಶ್ರೀ, ಚೈತ್ರಾ, ಚೆಸ್ ತರಬೇತುದಾರ ಸುರೇಶ್ ಕುಮಾರ್, ಸ್ವಿಮ್ಮಿಂಗ್ ಮತ್ತು ಸ್ಕೇಟಿಂಗ್ ತರಬೇತುದಾರ ಸುಶಿತ್‌ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮನಿಷಾ ಸ್ವಾಗತಿಸಿದರು. ವಿದ್ಯಾರ್ಥಿ ಸಂಭ್ರಮ್ ವಂದಿಸಿದರು. ಶಿಕ್ಷಕಿ ಗೌರಿ ಅತಿಥಿ ಪರಿಚಯ ನಡೆಸಿಕೊಟ್ಟರು. ವಿದ್ಯಾರ್ಥಿ ಅನುಶ್ರೀ ತರಬೇತುದಾರರ ಪರಿಚಯ ಮಾಡಿದರು. ವಿದ್ಯಾರ್ಥಿ ಸನ್ಮಯ್ ಕಾರ್ಯಕ್ರಮ ನಿರೂಪಿಸಿದರು.