

ಪುತ್ತೂರು: ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ವಿದ್ಯಾರ್ಥಿಗಳು ಪುತ್ತೂರಿನ ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಗಣಿತ, ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತವಾದ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಬಂಟ್ವಾಳದ ಗಿರೀಶ್ ಗೌಡ ಎಚ್ ಹಾಗೂ ಸುಮಿತ್ರ ದಂಪತಿ ಪುತ್ರಿ ಸಾನ್ವಿ (ಬಾಲ ವರ್ಗ) ಗಣಿತ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಪುತ್ತೂರಿನ ಡಾ. ರವಿ ನಾರಾಯಣ್ ಹಾಗೂ ಅಶ್ವಿನಿ ಬಿ ದಂಪತಿ ಪುತ್ರಿ ಆರಾಧ್ಯ(ಶಿಶುವರ್ಗದ) ವಿಜ್ಞಾನ ಪತ್ರ ವಾಚನದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಮುಕ್ರಂಪಾಡಿಯ ಪ್ರವೀಣ್ ದೊಡ್ಡಮಾಣಿ ಹಾಗೂ ಚಿತ್ಕಲ ಗೌರಿ ಕೆ ಪುತ್ರಿ ನಿಯತಿ ಭಟ್ (ಕಿಶೋರ ವರ್ಗ) ವಿಜ್ಞಾನ ಪ್ರಯೋಗದಲ್ಲಿ ಪ್ರಥಮ. ದರ್ಭೆಯ ಪ್ರವೀಣ್ ರಾವ್ ಸುಗಂಽನಿ ಅವರ ಪುತ್ರ ಪ್ರಿಯಾಂಶು ರಾವ್ ಹಾಗೂ ಪಡೀಲ್ ನ ಸುರೇಶ್ ಶೆಟ್ಟಿ ಹಾಗೂ ನೈನಾ ಎಸ್ ಶೆಟ್ಟಿ ಅವರ ಪುತ್ರ ಕನಿಷ್ಕ್ ಶೆಟ್ಟಿ ಮತ್ತು ಪೆರ್ಲಡ್ಕದ ಕರುಣಾಕರ ರೈ ಹಾಗೂ ಶಾಂತ ರೈ ಅವರ ಪುತ್ರಿ ಅದಿತಿ ರೈ (ಕಿಶೋರವರ್ಗ)ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪೆರ್ಲಡ್ಕದ ಎಸ್ ಯೋಗೀಶ್ ಕಲ್ಲೂರಾಯ ಹಾಗೂ ಕಪಿಲ ಪಿ ಬಿ ಅವರ ಪುತ್ರ ಯುಗನ್ ಹಿಮಾನಿಕಾ (ಶಿಶು ವರ್ಗ) ಜ್ಞಾನ ಪ್ರಯೋಗದಲ್ಲಿ ದ್ವಿತೀಯ. ಕೊಂಬೆಟ್ಟುವಿನ ಶ್ರೀಕೃಷ್ಣ ಎಂ ಮತ್ತು ಶಂಕರಿ ಎಚ್ ಅವರ ಪುತ್ರಿಅನ್ವಿತಾ, ತಾರೆಗುಡ್ಡೆ ಯ ಸತೀಶ್ ಶೆಟ್ಟಿ ಹಾಗೂ ಸುರೇಖಾ ದಂಪತಿ ಪುತ್ರಿ ಹೃನ್ಮಯಿ ಶೆಟ್ಟಿ, ಮುಕ್ರಂಪಾಡಿಯ ಈರದಾಸಪ್ಪ ಮತ್ತು ಜ್ಯೋತಿ ಎ ಅವರ ಪುತ್ರ ಪ್ರೇಮ್ ಇ ಅವರು (ಬಾಲ ವರ್ಗ) ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಕುಂಜೂರು ಪಂಜ ಶ್ರೀನಿವಾಸ್ ಮಯ್ಯ ಡಿ ಹಾಗೂ ಜಯಲಕ್ಷ್ಮೀಎಸ್ ಮಯ್ಯ ಅವರ ಪುತ್ರ, ಮಯೂರ್ ಎಸ್ ಮಯ್ಯ, ಕೊಡಿಂಬಾಡಿ ವಸಂತ್ ಬಿ ಗೌಡ ಹಾಗೂ ಮೀನಾಕ್ಷಿ ದಂಪತಿ ಪುತ್ರಿ ಶ್ರೀಯಾ ಹಾಗೂ ಪುಣಚ ವಿಜಯ್ ಕುಮಾರ್ ಮತ್ತು ಪ್ರತಿಭಾ ಕುಮಾರಿ ಪಿ ಅವರ ಪುತ್ರಿ ರೋಚಿಕ (ಶಿಶು ವರ್ಗ)ಗಣಿತ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.