ಅಂಬೇಡ್ಕರ್ ಜೀವನವೇ ಆದರ್ಶ

Ambedkar's life is ideal.
ದೇವರಹಿಪ್ಪರಗಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಭಾವಚಿತ್ರದ ಮೆರವಣಿಗೆ ನಡೆಯಿತು.
Published on

ದೇವರಹಿಪ್ಪರಗಿ: ಡಾ. ಅಂಬೇಡ್ಕರ್ ಯಾವುದೇ ಜಾತಿ, ಧರ್ಮ, ಮತ, ಪಂಥಗಳಿಗೆ ಸೀಮಿತವಾಗದೆ ವಿಶ್ವಮಾನವರೆನಿಸಿದ್ದಾರೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ನಡೆದ ಡಾ. ಅಂಬೇಡ್ಕರರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರ ಸಮಗ್ರ ಜೀವನವೇ ಆದರ್ಶ. ಇವರು ಮಾನವೀಯ ಮೌಲ್ಯಗಳು, ಶಿಕ್ಷಣ ಹಾಗೂ ಸಮಾನತೆಯ ಪ್ರತಿಪಾದನೆಯ ಪ್ರಮುಖ ಹರಿಕಾರರೆನಿಸಿದ್ದಾರೆ ಎಂದರು.

ತಾಳಿಕೋಟೆ ಎಸ್.ಕೆ.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಚಲವಾದಿ ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಂಬೇಡ್ಕರ್ ವೃತ್ತದಿಂದ ಮೊಹರೆ ಹಣಮಂತ್ರಾಯ ವೃತ್ತದವರೆಗೆ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ನಂತರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು.

ತಹಸೀಲ್ದಾರ್ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ತಾಪಂ ಇಒ ಭಾರತಿ ಚೆಲುವಯ್ಯ, ಶಿರಸ್ತೆದಾರ ಎಸ್.ಎಸ್. ಮ್ಯಾಕೇರಿ, ಸಮಾಜ ಕಲ್ಯಾಣ ಇಲಾಖೆಯ ಪೂಜಾ ನಿಕ್ಕಮ್, ಎಸ್.ಎಸ್. ಲಾತೂರ, ನಫೀಸಾ ಬೇಗಂ, ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ ವೈ.ಜಿ. ಗಂಗಶೆಟ್ಟಿ, ವಿಜಯಲಕ್ಷ್ಮೀ ನವಲಿ, ಸಮುದಾಯದ ಪ್ರಮುಖರಾದ ಪ್ರಕಾಶ ಮಲ್ಲಾರಿ, ಪ್ರಕಾಶ ಗುಡಿಮನಿ, ರಮೇಶ ಮ್ಯಾಕೇರಿ, ರಾಘವೇಂದ್ರ ಗುಡಿಮನಿ, ಮಾಂತೇಶ ದೊಡಮನಿ, ರಾಜಕುಮಾರ ಸಿಂದಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net