ಅಂಬೇಡ್ಕರ್ ಆದರ್ಶ ಪಾಲಿಸಿ

Ambedkar's ideal policy
ತೇರದಾಳ ಪಟ್ಟಣದ ತಕ್ಷಶಿಲಾ ಬುದ್ಧ ವಿಹಾರದಲ್ಲಿ ನಡೆದ ತೇರದಾಳ ತಾಲೂಕು ಹಾಗೂ ನಗರದ ಡಿಎಸ್‌ಎಸ್ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಂಚಾಲಕ ಪರುಶರಾಮ ಕಾಂಬಳೆ ಮಾತನಾಡಿದರು. ಬಸವರಾಜ ಹಳ್ಳದಮನಿ, ಬಸವರಾಜ ಪಾತ್ರೋಟ ಇದ್ದರು.
Published on

ತೇರದಾಳ: ಕಾಟಾಚಾರಕ್ಕೆ ಸಂಘಟನೆಗಳು ಬೇಡ. ಸಿದ್ಧಾಂತದ ಆಧಾರದ ಮೇಲೆ ಸಂಘಟನೆಗೆ ಮುಂದಾಗಿ ಎಂದು ಡಿಎಸ್‌ಎಸ್ (ಸಾಗರ ಬಣ) ಜಿಲ್ಲಾ ಸಂಚಾಲಕ ಪರುಶರಾಮ ಕಾಂಬಳೆ ಹೇಳಿದರು.

ಇಲ್ಲಿನ ದೇವರಾಜ ನಗರದಲ್ಲಿರುವ ತಕ್ಷಶಿಲಾ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ತೇರದಾಳ ತಾಲೂಕು ಹಾಗೂ ನಗರ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ನಮ್ಮ ಸಮುದಾಯವು ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲಿ ಎಂದು ಸಾಕಷ್ಟು ವಿಚಾರಧಾರೆಗಳೊಂದಿಗೆ ಸಂಘಟಿಸಿ ಹೋರಾಟ ನಡೆಸಿದ್ದಾರೆ. ಅಂತಹ ಮಹಾನ್ ಚೇತನ ಜೀವನದ ಆದರ್ಶ ಅಳವಡಿಸಿಕೊಂಡು ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ, ಖಜಾಂಚಿ ಬಸವರಾಜ ಪಾತ್ರೋಟ, ಮುಖಂಡರಾದ ದಯಾನಂದ ಕಾಳೆ, ಬಸವರಾಜ ದೊಡಮನಿ, ರಾಜು ಪೋಳ, ಪರಶರಾಮ ಕಾಂಬಳೆ, ರವೀಂದ್ರ ಸುಣಗಾರ, ರವಿ ಜಮಾದಾರ, ಚಿದಾನಂದ ಗುಡಕ್ಕನವರ, ದಯಾನಂದ ಧರೆನ್ನವರ, ಹನಮಂತ ಗಾಣಿಗೇರ, ಗೋಪಾಲ ಅಕ್ಕೆನ್ನವರ, ಪ್ರಭು ಹಟ್ಟೆನ್ನವರ, ಅಡಿವೆಪ್ಪ ಮರೆಗುದ್ದಿ, ರವಿ ಚಿಕ್ಕಲಕಿ, ಕೃಷ್ಣಾ ಶೇಗುಣಸಿ ಇನ್ನಿತರಿದ್ದರು.

ತೇರದಾಳ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net