

ಮುದ್ದೇಬಿಹಾಳ: ಸಂವಿಧಾನ ರಚನೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಬುದ್ಧ, ಬಸವರಂತೆ ಮನುಷ್ಯರಾಗಿ ಜನಿಸಿ ಮಾನವ ಕಲ್ಯಾಣಕ್ಕಾಗಿ ಬಂದ ದೇವದೂತರಾಗಿದ್ದಾರೆ ಎಂದು ಶಾಸಕ, ಕೆಎಸ್ಡಿ ನಿಗಮದ ಅಧ್ಯ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ತಾಲೂಕು ಆಡಳಿತ, ವಿವಿಧ ಸಂಟನೆಗಳು ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ರವರು ಸಂವಿಧಾನ ಕೊಡದಿದ್ದರೆ ಮಹಿಳೆಯರಿಗೆ, ಶೋಷಿತ ವರ್ಗದವರಿಗೆ ಸಮಾನತೆ, ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂದರು.
ಮುಖಂಡರಾದ ಡಿ.ಬಿ.ಮುದೂರ ಇನ್ನಿತರರು ಮಾತನಾಡಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ತಾಪಂ ಇಒ ನಿಂಗಪ್ಪ ಮಸಳಿ, ಪಿಎಸ್ಐ ಸಂಜಯ್ ತಿಪ್ಪರಡ್ಡಿ, ಬಿಇಒ ಬಿ.ಎಸ್.ಸಾವಳಗಿ, ಸರ್ಕಾರಿ ನೌಕರರ ಸಂದ ಅಧ್ಯ ಅರವಿಂದ ಹೂಗಾರ, ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಉಪಾಧ್ಯೆ ಪ್ರೀತಿ ದೇಗಿನಾಳ, ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಕಾಮರಾಜ ಬಿರಾದಾರ, ಹರೀಶ ನಾಟೀಕಾರ, ಕೆ.ಬಿ.ದೂಡಮನಿ ಇತರರಿದ್ದರು.