ಮನುವಾದ ರೋಗಕ್ಕೆ ಅಂಬೇಡ್ಕರ್ ಅರಿವು ಔಷಧ

14-01-Shiva-1
ರಾಯಚೂರಿನ ಪತ್ರಿಕಾ ಭವನದಲ್ಲಿ ಅಂಬೇಡ್ಕರ್ ಅರಿವು ಕೃತಿಯನ್ನು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಲೋಕಾರ್ಪಣೆ ಮಾಡಿದರು. ಆರ್‌ಸಿಎ್ ಅಧ್ಯಕ್ಷ ಅಜೀಜ್ ಜಾಗೀರದಾರ್, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ ಕಂದೇಗಾಲ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಮುಖಂಡರಾದ ಆದಿ ನಗನೂರು, ಚಂದ್ರಕಾಂತ ನೇರಳೆ, ಮಲ್ಕುಂಡಿ ಮಹಾದೇವಸ್ವಾಮಿ ಇದ್ದರು.
Published on

ರಾಯಚೂರು: ಮಕ್ಕಳ ಮಧ್ಯೆ ವಿಷದ ಬೀಜ ಬಿತ್ತಿ ಅವರಲ್ಲಿ ದ್ವೇಷ, ಅಸೂಯೆ, ಜಾತಿವಾದ, ತಾರತಮ್ಯ ಬೆಳೆಸುವ ಮೂಲಕ ಮನುವಾದದತ್ತ ಕೊಂಡೊಯ್ಯಲಾಗುತ್ತಿದೆ. ಇದು ದೇಶಕ್ಕೆ ಮಾರಕವಾಗಿದ್ದು, ಸಾಂಕ್ರಾಮಿಕ ರೋಗದಂತಾಗಿರುವ ಮನುವಾದಕ್ಕೆ ಅಂಬೇಡ್ಕರ್ ಅರಿವು ಔಷಧವಾಗಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಹೇಳಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಮಲ್ಕುಂಡಿ ಮಹಾದೇವಸ್ವಾಮಿಯ ಅಂಬೇಡ್ಕರ್ ಅರಿವು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಹಿಂದೆ ಶಾಲೆಗಳ ಗೋಡೆಗಳ ಮೇಲೆ ಇಂದಿನ ಬಾಲಕರು ಮುಂದಿನ ನಾಗರಿಕರು, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಬರಹಗಳು ಇಂದು ಮರೆಯಾಗಿವೆ. ಆದರೆ ಇಂದು ಮಕ್ಕಳಲ್ಲಿ ದ್ವೇಷ ಬಿತ್ತುವಂತಹ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ದೇಶದ ಚರಿತ್ರೆ, ಸಾಂಸ್ಕೃತಿಕ ಪರಂಪರೆಯ ಅಧ್ಯಯನದ ಕೊರತೆ ಎದ್ದು ಕಂಡು ಬರುತ್ತಿದೆ.
ಕೃತಿಯಲ್ಲಿ ಅನೇಕ ದಾರ್ಶನಿಕರ ಕಿರು ಪರಿಚಯವಿದೆ. ಬಸವಣ್ಣ, ಭೀಮಬಾಯಿ, ಗೌತಮ ಬುದ್ಧ, ಸಾವಿತ್ರಿಬಾಯಿ ುಲೆ ಸೇರಿದಂತೆ ಹಲವು ಮಹನೀಯ ಪರಿಚಯ ನೀಡಲಾಗಿದ್ದು, ಮಕ್ಕಳಿಗೆ ಓದಲು ನೀಡಬೇಕಾಗಿದೆ ಎಂದು ಆರ್.ಮಾನಸಯ್ಯ ಹೇಳಿದರು.
ದಲಿತ ಮುಖಂಡ ಎಂ.ಆರ್.ಭೇರಿ ಮಾತನಾಡಿ, ಅಂಬೇಡ್ಕರ್‌ರ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅರಿವು ಪುಸ್ತಕ ರಚನೆ ಮಾಡಲಾಗಿದೆ. ಪುಸ್ತಕವನ್ನು ಮನೆ ಮನಗಳಿಗೆ ಅದರಲ್ಲೂ ಮಕ್ಕಳಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.
ದೇಶ ಸಂವಿಧಾನದ ಮೇಲೆ ನಿಂತಿದ್ದು, ಸಂವಿಧಾನ ರಚನೆಗೆ ಕಾರಣರಾದ ಅಂಬೇಡ್ಕರ್ ಬಗ್ಗೆ ಮಕ್ಕಳಿಗೆ ಸಮರ್ಪಕ ಮಾಹಿತಿಯಿಲ್ಲ. ಮಕ್ಕಳಿಗೆ ಅಂಬೇಡ್ಕರ್‌ರ ಚಿಂತನೆಗಳು ಮತ್ತು ಆಶಯಗಳ ಕುರಿತು ಮನಮುಟ್ಟುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಆರ್‌ಸಿಎ್ ಅಧ್ಯಕ್ಷ ಅಜೀಜ್ ಜಾಗೀರದಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ ಕಂದೇಗಾಲ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಮುಖಂಡರಾದ ಆದಿ ನಗನೂರು, ಚಂದ್ರಕಾಂತ ನೇರಳೆ, ಮಲ್ಕುಂಡಿ ಮಹಾದೇವಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net